ದಿನಗೂಲಿ ಕೆಲಸದಾಕೆಗೆ ವಿದ್ಯುತ್ ಶಾಕ್; 1.49 ಲಕ್ಷ ರೂ ಬಿಲ್ ನೋಡಿ ಬೇಸ್ತು ಬಿದ್ದ ಮಹಿಳೆ

ದಿನಗೂಲಿ ಮಾಡುವ ಕೆಲಸದಾಕೆಗೆ ವಿದ್ಯುತ್ ಇಲಾಖೆ ಶಾಖ್ ನೀಡಿದ್ದು, ಬರೊಬ್ಬರಿ 1.49 ಲಕ್ಷ ರೂ ಬಿಲ್ ಪಾವತಿಸುವಂತೆ ಬಿಲ್ ಕಳುಹಿಸಿದೆ.
ವಿದ್ಯುತ್ ಬಿಲ್
ವಿದ್ಯುತ್ ಬಿಲ್
Updated on: 

ಅನಂತಪುರ: ದಿನಗೂಲಿ ಮಾಡುವ ಕೆಲಸದಾಕೆಗೆ ವಿದ್ಯುತ್ ಇಲಾಖೆ ಶಾಖ್ ನೀಡಿದ್ದು, ಬರೊಬ್ಬರಿ 1.49 ಲಕ್ಷ ರೂ ಬಿಲ್ ಪಾವತಿಸುವಂತೆ ಬಿಲ್ ಕಳುಹಿಸಿದೆ.

ಹೌದು.. ಆಂಧ್ರ ಪ್ರದೇಶದ ಅನಂತಪುರದಲ್ಲಿ ಈ ಘಟನೆ ನಡೆದಿದ್ದು, ಕನೇಕಲ್ ಮಂಡಲ್ ಕೇಂದ್ರ ಕಚೇರಿಯ ಜಿಲ್ಲಾ ಪರಿಷತ್ ಬಾಲಕರ ಪ್ರೌಢ ಶಾಲೆಯ ಬಳಿ ಇರುವ ಸಣ್ಣ ಮನೆಗೆ 1,49,034 ರೂಗಳ ವಿದ್ಯುತ್ ಬಿಲ್ ನೀಡಲಾಗಿದೆ, ದಿನಗೂಲಿ ನೌಕರರಾಗಿರುವ ನಾಗಮ್ಮ ಬಿಲ್ ನೋಡಿ ಆಘಾತಕ್ಕೊಳಗಾಗಿದ್ದು,  ಪ್ರತೀ ತಿಂಗಳ ತಮ್ಮ ಮನೆಯ ವಿದ್ಯುತ್ ಬಿಲ್ 100 ರೂ ಕೂಡ ಮೀರುತ್ತಿರಲಿಲ್ಲ. ಆದರೆ ಈ ಬಾರಿ ಬರೊಬ್ಬರಿ 1.49 ಲಕ್ಷ ರೂ ಬಿಲ್ಲ್ ಬಂದಿದೆ ಎಂದು ಹೇಳಿದ್ದಾರೆ.

ತಮ್ಮ ಮನೆಯಲ್ಲಿ ಒಂದು ಟ್ಯೂಬ್ ಲೈಟ್, ಫ್ಯಾನ್ ಮತ್ತು ಟಿವಿ ಮಾತ್ರ ಇದ್ದು, ಇದಾಗ್ಯೂ ಇಷ್ಟೊಂದು ಬಿಲ್ ಬಂದಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಕಳೆದ ಏಪ್ರಿಲ್ ನಿಂದ ನಾನು ಬಿಲ್ ಪಾವತಿ ಮಾಡಿರಲ್ಲಿಲ್ಲ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಕೆಲಸವಿರಲ್ಲಿಲ್ಲ. ಹೀಗಾಗಿ ವಿದ್ಯುತ್ ಬಿಲ್ ಪಾವತಿಸಿಲಾಗಿರಲಿಲ್ಲ.  ಆದರೆ ಅಷ್ಟೂ ತಿಂಗಳ ಬಿಲ್ ಒಟ್ಟಿಗೆ ಬಂದರೂ 1ಸಾವಿರ ರೂ ದಾಟುವುದಿಲ್ಲ. ಆದರೆ  1.49 ಲಕ್ಷ ರೂ ಬಿಲ್ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಎಪಿ ಟ್ರಾನ್ಸ್ಕೊ ಅಸಿಸ್ಟೆಂಟ್ ಎಂಜಿನಿಯರ್ ಶ್ರೀನಿವಾಸ್ ರೆಡ್ಡಿ ಅವರ ಗಮನಕ್ಕೆ ತಂದಾಗ, ಹೆಚ್ಚುವರಿ ಬಿಲ್ಲಿಂಗ್ ತಾಂತ್ರಿಕ ದೋಷಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. "ನಾಗಮ್ಮ ವಿದ್ಯುತ್ ಬಿಲ್ ಅನ್ನು ನಮ್ಮ ಬಳಿಗೆ ತಂದರೆ ನಾವು ಈ ವಿಷಯವನ್ನು ಪರಿಹರಿಸುತ್ತೇವೆ. ಈ ವಿಷಯವನ್ನು  ಪರಿಹರಿಸಿದ ನಂತರ ಗ್ರಾಹಕರಿಗೆ ಮೊದಲಿನಂತೆ ಸಾಮಾನ್ಯ ಬಿಲ್ ಸಿಗುತ್ತದೆ" ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com