ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

2012-13 ಮತ್ತು 2016-17 ಅವಧಿಯಲ್ಲಿ ರೈತರ ಆದಾಯ ಕೇವಲ 2,505 ರೂಪಾಯಿ ಏರಿಕೆ 

ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಎನ್ ಡಿಎ ಅವಧಿಯಲ್ಲಿ ರೈತರ ಆದಾಯ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಹೇಳಿವೆ. 
Published on

ನವದೆಹಲಿ: ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಎನ್ ಡಿಎ ಅವಧಿಯಲ್ಲಿ ರೈತರ ಆದಾಯ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಹೇಳಿವೆ. 

ನಬಾರ್ಡ್ ನಿಂದ ನಡೆಸಲಾದ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (ಎನ್ಎಸ್ಒ) ಅಧ್ಯಯನ, 2013 ರಲ್ಲಿ ನಡೆಸಿದ್ದ ಕೃಷಿ ಮನೆತನಗಳ ಪರಿಸ್ಥಿತಿ ಮೌಲ್ಯಮಾಪನ ಸಮೀಕ್ಷೆಯಲ್ಲಿ ಕೃಷಿಕರ ಮಾಸಿಕ ಆದಾಯ ಸರಾಸರಿ 6,426 ರಷ್ಟಿದ್ದು, 2016-17 ರ ವೇಳೆಗೆ ಅದು 8,931 ರಷ್ಟಾಗಿದೆ ಎಂದು ತಿಳಿದುಬಂದಿದ್ದು, 2012-13 ಹಾಗೂ 2016-17 ರ ಅವಧಿಯಲ್ಲಿ ರೈತರ ಆದಾಯ ಕೇವಲ 2,505 ರೂಪಾಯಿ ಏರಿಕೆಯಾಗಿದೆ. 2013 ರ ನಂತರದಲ್ಲಿ ಕೃಷಿ ಮನೆತನಗಳ ಆದಾಯಕ್ಕೆ ಸಂಬಂಧಿಸಿದಂತೆ ಎನ್ಎಸ್ಎಸ್ಒ ಯಾವುದೇ ಸಮೀಕ್ಷೆಯನ್ನೂ ಈವರೆಗೂ ನಡೆಸಿಲ್ಲ. 

ಪಂಜಾಬ್, ಹರ್ಯಾಣ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ರೈತರ ಆದಾಯ ಗರಿಷ್ಠ ಪ್ರಮಾಣದಲ್ಲಿದ್ದು, ರಾಜ್ಯದ ಆರ್ಥಿಕತೆಗೂ ಹೆಚ್ಚಿನ ಕೊಡುಗೆಯನ್ನು ಸೂಚಿಸುತ್ತಿದೆ. ಜಾರ್ಖಂಡ್, ಆಂಧ್ರಪ್ರದೇಶ, ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ ಮಾಸಿಕ ಕೃಷಿ ತಲಾದಾಯ 7,000 ಕ್ಕಿಂತ ಕಡಿಮೆ ಇದ್ದು,  ಸಾಮಾನ್ಯ ಮಟ್ಟದಲ್ಲಿದೆ. ಕೃಷಿ ಅರ್ಥಶಾಸ್ತ್ರಜ್ಞ ದೇವೀಂದರ್ ಶರ್ಮಾ ವರ್ಷದಿಂದ ವರ್ಷಕ್ಕೆ ಕೃಷಿ ಬೆಳವಣಿಗೆಯಿಂದ ರೈತರಿಗೆ ಲಾಭ ತಲುಪುತ್ತಿಲ್ಲ ಎಂದು ಹೇಳಿದ್ದಾರೆ. 

ಹಣದುಬ್ಬರವನ್ನು ಬೆಳವಣಿಗೆಗೆ ಸರಿದೂಗಿಸಿದರೆ, ಕೃಷಿ ಆದಾಯ ಸ್ಥಿರವಾಗಿಯೇ ಉಳಿಯುತ್ತದೆ ಅಥವಾ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com