ಪ್ರಧಾನಿ ಮೋದಿ ಹಾಗೂ ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮೈಂಟ್
ಪ್ರಧಾನಿ ಮೋದಿ ಹಾಗೂ ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮೈಂಟ್

ಭಾರತ-ಮ್ಯಾನ್ಮಾರ್ ನಡುವೆ ವಿವಿಧ ಕ್ಷೇತ್ರಗಳ 10 ಒಪ್ಪಂದಗಳ ವಿನಿಮಯ

ಮೂಲಸೌಕರ್ಯ, ಇಂಧನ, ಸಂವಹನ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 10 ಮಹತ್ವದ ಒಪ್ಪಂದಗಳನ್ನು ಭಾರತ ಮತ್ತು ಮ್ಯಾನ್ಮಾರ್‌ ಗುರುವಾರ ವಿನಿಮಯ ಮಾಡಿಕೊಂಡಿವೆ.
Published on

ನವದೆಹಲಿ: ಮೂಲಸೌಕರ್ಯ, ಇಂಧನ, ಸಂವಹನ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 10 ಮಹತ್ವದ ಒಪ್ಪಂದಗಳನ್ನು ಭಾರತ ಮತ್ತು ಮ್ಯಾನ್ಮಾರ್‌ ಗುರುವಾರ ವಿನಿಮಯ ಮಾಡಿಕೊಂಡಿವೆ.
  
ಪ್ರಧಾನಿ ನರೇಂದ್ರ ಮೋದಿ ಹಾಗೂ ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮೈಂಟ್ ಅವರ ನಡುವೆ ಹೈದರಾಬಾದ್ ಹೌಸ್‌ನಲ್ಲಿ ನಡುವೆ ನಡೆದ ಮಾತುಕತೆ ನಂತರ ಒಪ್ಪಂದಗಳು ಮತ್ತು ಒಡಂಬಡಿಕೆಗಳಿಗೆ  ಸಹಿ ಹಾಕಲಾಯಿತು. ಉಭಯ ನಾಯಕರು ದ್ವಿಪಕ್ಷೀಯ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆ ನಡೆಸಿದರು. ಯು ವಿನ್ ಮೈಂಟ್ ಅವರು ತಮ್ಮ ಪತ್ನಿ ಡಾ ಚೋ ಚೋ ಅವರೊಂದಿಗೆ ಭಾರತದ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಬುಧವಾರ ಇಲ್ಲಿಗೆ ಆಗಮಿಸಿದ್ದಾರೆ. 
  
ನಿನ್ನೆ ಮ್ಯಾನ್ಮಾರ್ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ಕೋರಲಾಯಿತು.  ರಾಜ್‌ಘಾಟ್‌ಗೆ ಭೇಟಿ ನೀಡಿದ ಯು ವಿನ್ ಮೈಂಟ್ ದಂಪತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜೀ ಅವರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರೊಂದಿಗೆ ಯು ವಿನ್ ಮೈಂಟ್ ಮಾತುಕತೆ ನಡೆಸಿದರು.  ಭಾರತ ಮತ್ತು ಮ್ಯಾನ್ಮಾರ್  ಧಾರ್ಮಿಕ, ಭಾಷೆ ಮತ್ತು ಜನಾಂಗೀಯ ಸಂಬಂಧಗಳನ್ನು ಹೊಂದಿವೆ. ಭಾರತದ ಗಡಿಯಲ್ಲಿರುವ ಮ್ಯಾನ್ಮಾರ್, ಆಗ್ನೇಯ ಏಷ್ಯಾಕ್ಕೆ ಹೆಬ್ಬಾಗಿಲು ಒದಗಿಸುವ ಏಕೈಕ ಆಸಿಯಾನ್ ದೇಶ ಮ್ಯಾನ್ಮಾರ್ ಆಗಿದೆ. 
  
ಮ್ಯಾನ್ಮಾರ್‌ನೊಂದಿಗೆ ಸಹಕಾರವನ್ನು ಹೆಚ್ಚಿಸಲು ಭಾರತವು ಒತ್ತು ನೀಡಿದೆ. ಭಾರತ, ಮ್ಯಾನ್ಮಾರ್‌ನ ಐದನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ಸದ್ಯದ  ದ್ವಿಪಕ್ಷೀಯ ವ್ಯಾಪಾರ- ವಾಣಿಜ್ಯ ವಹಿವಾಟು 7 1.7 ಶತಕೋಟಿ ಡಾಲರ್ ನಷ್ಟಿದೆ.  ಮ್ಯಾನ್ಮಾರ್ ಅಧ್ಯಕ್ಷರು ಬೋಧ್ ಗಯಾ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com