ಪ್ರೇಮ ವೈಫಲ್ಯ: ಯುವಕ ಆತ್ಮಹತ್ಯೆ

ಪ್ರೇಮ ವೈಫಲ್ಯದಿಂದ ಮನನೊಂದ ವ್ಯಕ್ತಿಯೋರ್ವ ನೇಣಿಗೆ  ಶರಣಾಗಿರುವ ದುರ್ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ  ನಡೆದಿದೆ.
ಪ್ರೇಮ ವೈಫಲ್ಯ: ಯುವಕ ಆತ್ಮಹತ್ಯೆ
ಪ್ರೇಮ ವೈಫಲ್ಯ: ಯುವಕ ಆತ್ಮಹತ್ಯೆ
Updated on

ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ದುರ್ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ  ನಡೆದಿದೆ.

ಅಸ್ಸಾಂ ಮೂಲದ ಕೀನಂನಾಥ್ (25) ಆತ್ಮಹತ್ಯೆ ಮಾಡಿಕೊಂಡವರು. ಇಲ್ಲಿನ ಹೋಟೆಲ್ ಒಂದರಲ್ಲಿ ಅಡುಗೆಭಟ್ಟನಾಗಿದ್ದ ಕೀನಂ ನಾಥ್ ಪ್ರೇಮ  ವೈಫಲ್ಯದಿಂದ ನೊಂದು ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದಾಗ ಫ್ಯಾನ್ ಗೆ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂನಿಂದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಕೀನಂನಾಥ್ ಹಲವು ದಿನಗಳಿಂದ ಹೋಟೆಲ್ ಒಂದರಲ್ಲಿ ಅಡುಗೆಭಟ್ಟನಾಗಿ ಕೆಲಸ ಮಾಡಿಕೊಂಡಿದ್ದು ಇನ್ನು ಆತನಿಗೆ ವಿವಾಹವಾಗಿರಲಿಲ್ಲ. ಯುವತಿಯೊಂದಿಗೆ ಆಕೆಯ ಸಲುಗೆ ಇತ್ತು. ಇಬ್ಬರ ನಡುವೆ ಯಾವುದೇ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.  ಪ್ರಕರಣ ದಾಖಲಿಸಿಕೊಂಡಿರುವ ಬಂಡೇಪಾಳ್ಯ ಪೊಲೀಸರು  ಮುಂದಿನ ತನಿಖೆ ಕೈಗೊಂಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com