ಹೌಡಿ ಮೋದಿ ರೀತಿ ಗುಜರಾತ್ ನಲ್ಲಿ ಹೌಡಿ ಟ್ರಂಪ್? 

ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಹೂಸ್ಟನ್ ನಲ್ಲಿ ನಡೆದಿದ್ದ ಹೌಡಿ ಮೋದಿ ರೀತಿಯದ್ದೇ ಸಮಾವೇಶವೊಂದನ್ನು ಗುಜರಾತ್ ನಲ್ಲಿ ಆಯೋಜಿಸಲು ಉತ್ಸುಕರಾಗಿದ್ದಾರೆಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಹೂಸ್ಟನ್ ನಲ್ಲಿ ನಡೆದಿದ್ದ ಹೌಡಿ ಮೋದಿ ರೀತಿಯದ್ದೇ ಸಮಾವೇಶವೊಂದನ್ನು ಗುಜರಾತ್ ನಲ್ಲಿ ಆಯೋಜಿಸಲು ಉತ್ಸುಕರಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಕಳೆದ ವರ್ಷ ಅಮೆರಿಕಾದ ಹೂಸ್ಟನ್ ಗೆ ಭೇಟಿ ನೀಡಿದ್ದ ಮೋದಿಯವರಿಗಾಗಿ ಹೌಡಿ ಮೋದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಸೂಪರ್ ಹಿಟ್ ಆಗಿತ್ತು. ಇದಕ್ಕೆ ಟ್ರಂಪ್ ಕೂಡ ಫಿದಾ ಆಗಿದ್ದು, ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಟ್ರಂಪ್ ಅವರು, ಗುಜರಾತ್ ರಾಜ್ಯದಲ್ಲಿ ಹೌಡಿ ಟ್ರಂಪ್ ಕಾರ್ಯಕ್ರಮದ ಕುರಿತು ಒಲವು ಹೊಂದಿದ್ದಾರೆಂದು ಹೇಳಲಾಗುತ್ತಿದೆ. 

ಈ ಮೂಲಕ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಅನಿವಾಸಿ ಭಾರತೀಯರು, ವಿಶೇಷವಾಗಿ ಗುಜರಾತಿ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com