ಮೋದಿ-ಬೋಲ್ಸನಾರೊ ಮಾತುಕತೆ: 15 ಒಪ್ಪಂದಗಳಿಗೆ ಅಂಕಿತ

ಪರಸ್ಪರ ದ್ವಿಪಕ್ಷೀಯ ಭಾಂದವ್ಯ ಹೆಚ್ಚಿಸುವ 15 ಮಹತ್ವದ ಒಪ್ಪಂದಗಳಿಗೆ  ಭಾರತ ಮತ್ತು ಬ್ರೆಜಿಲ್ ಶನಿವಾರ ಪರಸ್ಪರ ಸಹಿ ಹಾಕಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಪರಸ್ಪರ ದ್ವಿಪಕ್ಷೀಯ ಭಾಂದವ್ಯ ಹೆಚ್ಚಿಸುವ 15 ಮಹತ್ವದ ಒಪ್ಪಂದಗಳಿಗೆ  ಭಾರತ ಮತ್ತು ಬ್ರೆಜಿಲ್ ಶನಿವಾರ ಪರಸ್ಪರ ಸಹಿ ಹಾಕಿವೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಭೇಟಿ ನೀಡಿರುವ  ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ನಡುವಿನ ದ್ವಿಪಕ್ಷೀಯ ಮಾತುಕತೆಯ ನಂತರ  ಸೈಬರ್ ಭದ್ರತೆ ಆರೋಗ್ಯ ,ತೈಲ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಒಪ್ಪಂದಗಳು ಎರಡು ದೇಶಗಳ ನಡುವೆ ಮತ್ತಷ್ಟು ಭಾಂದವ್ಯ ಗಟ್ಟಿ ಮಾಡಲು  ಸಹಾಯಕವಾಗಲಿದೆ ಎಂದ ನಂತರ  ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದರು. ಹೂಡಿಕೆ ಸಹಕಾರ ಮತ್ತು ಸೌಲಭ್ಯ ಒಪ್ಪಂದಕ್ಕೆ   ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಮತ್ತು ಅವರ ಬ್ರೆಜಿಲ್ ಸಚಿವ  ಅರ್ನೆಸ್ಟೊ ಅರಾಜೊ ಅವರು ಸಹಿ ಹಾಕಿದರು.

ನಂತರ ಜಂಟಿ  ಸುದ್ದಿಗೋಷ್ಟಿಯಲ್ಲಿ  ಮಾತನಾಡಿದ ಮೋದಿ, ಭಾನುವಾರ ಗಣರಾಜ್ಯೋತ್ಸವದ ಸಮಾರಂಭದ ಮುಖ್ಯಅತಿಥಿಯಾಗಿ ಬಂದಿರುವ  ಬ್ರೆಜಿಲ್ ಅಧ್ಯಕ್ಷರಿಗೆ ಆತಿಥ್ಯ ವಹಿಸುತ್ತಿರುವುದು ಹೆಮ್ಮೆ ಮತ್ತು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು. ಭೌಗೋಳಿಕ ವ್ಯತ್ಯಾಸಗಳ ಹೊರತಾಗಿಯೂ, ನಾವು ಅನೇಕ ಕ್ಷೇತ್ರಗಳಲ್ಲಿ ಒಟ್ಟಾಗಿದ್ದೇವೆ   ಎರಡು ಕಡೆಯ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲಾಗುವುದೇ  ನಮ್ಮ ಗುರಿಯಾಗಿದೆ. ಭಾರತ ಮತ್ತು ಬ್ರೆಜಿಲ್ ಎರಡೂ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳ ಬಗ್ಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿವೆ ಎಂದೂ  ಮೋದಿ ಹೇಳಿದರು. 

ಭಾನುವಾರದ ಗಣರಾಜ್ಯೋತ್ಸವ ಪರೇಡ್‌ಗಾಗಿ ತಾವು ಬಹಳ ಕೂತುಹಲದಿಂದ  ಕಾಯುತ್ತಿರುವುದಾಗಿ ಪ್ರತಿಯಾಗಿ ಬ್ರೆಜಿಲ್ ಅಧ್ಯಕ್ಷರು ಹೇಳಿದ್ದಾರೆ. ನಾವು ಒಬ್ಬರಿಗೊಬ್ಬರು ಹೆಚ್ಚಿನದನ್ನು ನೀಡುವ ಸ್ಥಿತಿಯಲ್ಲಿದ್ದೇವೆ. ಬ್ರೆಜಿಲ್ ಭಾರತಕ್ಕೆ  ನೀಡಲು ಸಾಕಷ್ಟು ಸಂಪನ್ನೂಲ ಹೊಂದಿದೆ ಮತ್ತು ಇನ್ನೊಂದು ರೀತಿಯಲ್ಲಿ, ಬ್ರೆಜಿಲ್ ಗೆ  ಇನ್ನು ಹೆಚ್ಚಿನದನ್ನು ಕೊಡಲು  ಭಾರತವೂ  ಸಿದ್ದವಿದೆ ಎಂದೂ  ಭೇಟಿ ನೀಡಿರುವ ವಿದೇಶಿ  ಗಣ್ಯರು ಹೇಳಿದರು.

ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂರನೇ ಬ್ರೆಜಿಲ್ ಅಧ್ಯಕ್ಷ ಅಧ್ಯಕ್ಷ ಬೋಲ್ಸನಾರೊ.ಇದಕ್ಕೂ ಮೊದಲು, ಭಾರತವು 1996 ಮತ್ತು 2004 ರಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ  ಬ್ರೆಜಿಲ್ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com