ಕ್ಲಾಸ್ ರೂಮಿನಲ್ಲಿ 8ನೇ ತರಗತಿ ಹುಡುಗ, ಹುಡುಗಿ ಕಿಸ್ಸಿಂಗ್: ವಿಡಿಯೋ ವೈರಲ್ 

ಕ್ಲಾಸ್ ರೂಮಿನಲ್ಲಿ ಎಂಟನೇ ತರಗತಿಯ ಹುಡುಗ, ಹುಡುಗಿ ಕಿಸ್ಸಿಂಗ್  ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗೋದ್ರಾ: ಕ್ಲಾಸ್ ರೂಮಿನಲ್ಲಿ ಎಂಟನೇ ತರಗತಿಯ ಹುಡುಗ, ಹುಡುಗಿ ಕಿಸ್ಸಿಂಗ್  ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ಕಿಸ್ಸಿಂಗ್ ಪ್ರಕರಣದ ಬಗ್ಗೆ ಶಿಕ್ಷಣ ಇಲಾಖೆಯಿಂದ ಪಂಚಮಹಲ್ ಜಿಲ್ಲಾ ಮಟ್ಟದ ಅಧಿಕಾರಿಗಳು ವರದಿ ಕೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋದ್ರಾದಿಂದ ಎಂಟು ಕಿಲೋ ಮೀಟರ್ ದೂರದಲ್ಲಿರುವ ಮೊರ್ವಾ ಹಡಾಫ್ ನ ಕ್ರುಶಿಕರ್  ಪ್ರೌಢ  ಶಾಲೆಯ ಇಬ್ಬರು ವಿದ್ಯಾರ್ಥಿಗಳು ಕಿಸ್ಸಿಂಗ್ ಮಾಡುತ್ತಿರುವುದು ಈ ವಿಡಿಯೋದಲ್ಲಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಕಿಸ್ಸಿಂಗ್ ವಿಡಿಯೋ ಸಂಬಂಧ ಕ್ರುಶಿಕರ್  ಪ್ರೌಢ  ಶಾಲೆಯ ಆಡಳಿತ ಮಂಡಳಿಯಿಂದ ವರದಿ ಕೇಳಲಾಗಿದೆ ಎಂದು ಪಂಚಮಹಲ್ ಜಿಲ್ಲಾ ಶಿಕ್ಷಣ ಅಧಿಕಾರಿ ಬಿಎಸ್ ಪಂಚಾಲ್ ಹೇಳಿದ್ದಾರೆ. 

ಈ ಘಟನೆ ಸಂಬಂಧ ವಿದ್ಯಾರ್ಥಿಗಳ ಪೋಷಕರಿಗೆ ಸುದ್ದಿ ತಿಳಿಸಲಾಗಿದೆ. ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಅಶ್ವಿನ್ ಪಟೇಲ್ ಹೇಳಿದ್ದಾರೆ.

ಭಾನುವಾರ ರಜೆದಿನವಾಗಿರುವುದರಿಂದ ಸೋಮವಾರ ಸಿಬ್ಬಂದಿ ಹಾಗೂ ವಿದ್ಯಾರ್ಥಿಯನ್ನು ವಿಚಾರಿಸಲಾಗುವುದು,  ಪ್ರತಿಯೊಬ್ಬರ ಜೊತೆಗೆ ಮಾತನಾಡಿದ ಈ ಘಟನೆ ಸಂಬಂಧ ಸ್ಪಷ್ಟ ಚಿತ್ರಣ ಪಡೆಯಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com