ನವದೆಹಲಿ: 2019ರ ಫೆಬ್ರವರಿ 14ರಂದು 40 ಸಿಆರ್ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದ ಪುಲ್ವಾಮಾ ದಾಳಿ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ತಿಳಿಸಿದೆ.
ಆರೋಪಿಯನ್ನು ಪುಲ್ವಾಮಾದ ಕಾಕಪೋರಾದ ಹಾಜಿಬಲ್ ನಿವಾಸಿ ಬಿಲಾಲ್ ಅಹ್ಮದ್ ಕುಚೆ ಎಂದು ಗುರುತಿಸಲಾಗಿದೆ.
ಆರೋಪಿ ಕುಚೆ ತನ್ನ ಊರಿನಲ್ಲಿ ಸಾ ಮಿಲ್ ನಡೆಸುತ್ತಿದ್ದು, ಭಯೋತ್ಪಾದಕ ಸಹವರ್ತಿಯಾಗಿದ್ದಾನೆ. ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿರುವ ಜೈಷ್ ಎ ಮೊಹಮದ್ ಭಯೋತ್ಪಾದಕರಿಗೆ ಸರಕು ಪೂರೈಕೆ ನೆರವು ಒದಗಿಸಿದ್ದಾನೆ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.
Advertisement