ಕಾನ್ಪುರ ಪೊಲೀಸರ ಹತ್ಯಾಕಾಂಡ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಎನ್'ಕೌಂಟರ್ ನಲ್ಲಿ ಹತ್ಯೆ
ಕಾನ್ಪುರ: 8 ಮಂದಿ ಪೊಲೀಸರ ಹತ್ಯಾಕಾಂಡ ನಡೆಸಿದ್ದ ಕುಖ್ಯಾತ ಗ್ಯಾಂಗ್'ಸ್ಟರ್ ವಿಕಾಸ್ ದುಬೆ ಸಹಚರನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಎನ್'ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಗುರುವಾರ ತಿಳಿದುಬಂದಿದೆ.
ಹತ್ಯೆಯಾದ ಆರೋಪಿಯನ್ನು ಬಹುವಾ ದುಬೆಯೆಂದು ಗುರ್ತಿಸಲಾಗಿದೆ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ವಿಫ್ಟ್ ಕಾರೊಂದನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು, ಬಳಿಕ ಪೊಲೀಸ ಕೈಗೆ ಸಿಕ್ಕಿಬಿದ್ದರು. ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಬೌವಾ ದುಬೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿ ಆಕಾಶ್ ತೋಮರ್ ಅವರು ಹೇಳಿದ್ದಾರೆ.
ಹತ್ಯೆಯಾದ ಬಹುವಾ ದುಬೆ, ವಿಕಾಸ್ ದುಬೆ ಜೊತೆಗೆ ಇದ್ದ ಎಂದು ಹೇಳಲಾಗುತ್ತಿದೆ. ಇದೀಗ ಆತನ ಬಳಿಯಿದ್ದ ಪಿಸ್ತೂಲ್, ಡಬಲ್ ಬ್ಯಾರೆಲ್ ಗನ್ ಹಾಗೂ ಸಿಡಿಮದ್ದುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಹತ್ಯಾಯಾದ ಬೌವಾ ದುಬೆ ಜೊತೆಗೆ ಇದ್ದ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಕಾನ್ಪುರ ಎನ್'ಕೌಂಟರ್ ಪ್ರಕರಣ ಸಂಬಂಧ ನಿನ್ನೆಯಷ್ಟೇ ಫರೀದಾಬಾದ್ ನಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು.
ಘಟನೆ ಬಳಿಕ ವಿಕಾಸ್ ದುಬೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ವೇಳೆ ಆತ ಫರೀದಾಬಾದ್'ನ ಹೋಟೆಲ್ ನಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಪೊಲೀಸರ ಕೈಗೆ ಸಿಗದೆ ದೆಹಲಿಗೆ ಪರಾರಿಯಾಗಿದ್ದ. ಕಾರ್ಯಾಚಱರಣೆ ವೇಳೆ ದುಬೆಯ ಮೂವರು ಸಹಚರರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು.
ಬಂಧನದ ಬಳಿಕ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದೊಯ್ಯುವ ವೇಳೆ ವಾಹನದ ಟೈರ್'ನ್ನು ಬದಲಿಸಲು ಮುಂದಾಗಿದ್ದಾರೆ. ಈ ವೇಳೆ ವಾಹನದಲ್ಲಿದ್ದ ಆರೋಪಿ ಪ್ರಭಾತ್ ಮಿಶ್ರಾ ಪೊಲೀಸರ ಪಿಸ್ತೂಲು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದರು. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಈ ನಡುವೆ ಗ್ಯಾಂಗ್'ಸ್ಟರ್ ವಿಕಾಸ್ ದುಬೆ ಸಹಚರನಾಗಿದ್ದ ರಣಬೀರ್ ಅಲಿಯಾಸ್ ಬೌವಾ ದುಬೆಯನ್ನು ಇಂದು ಬೆಳಿಗ್ಗೆ ಎನ್'ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ