

ನವದೆಹಲಿ: ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ(ಇಸಿಒಎಸ್ಒಸಿ) ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾರತದ ಪಾತ್ರ ಮತ್ತು ಕೊಡುಗೆಯ ಬಗ್ಗೆ ಪಿಎಂ ಮೋದಿ ಅವರು ಅಂತರರಾಷ್ಟ್ರೀಯ ಸಮುದಾಯಕ್ಕೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ ಎಂದು ಕೇಂದ್ರ ಸಚಿವ ಡಾ.ಎಸ್.ಜೈಶಂಕರ್ ಶನಿವಾರ ಹೇಳಿದ್ದಾರೆ.
ಕಳೆದ ತಿಂಗಳು ಭದ್ರತಾ ಮಂಡಳಿಯ ಸದಸ್ಯರಾಗಿ ಭಾರತ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಪ್ರಧಾನ ಮಂತ್ರಿ ತಮ್ಮ ಭಾಷಣಗಳಲ್ಲಿ ಕೋವಿಡ್ 19 ವಿರುದ್ಧ ಹೋರಾಡುವ ಭಾರತದ ಪ್ರಯತ್ನವನ್ನು ಶ್ಲಾಘಿಸಿದರು. "ನಮ್ಮ ಧ್ಯೇಯವಾಕ್ಯವೆಂದರೆ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' - ಇದರರ್ಥ 'ಎಲ್ಲರ ಜೊತೆ, ಪ್ರತಿಯೊಬ್ಬರ ಬೆಳವಣಿಗೆಗೆ, ಎಲ್ಲರ ನಂಬಿಕೆಯೊಂದಿಗೆ ಎಂದು ವಿದೇಶಾಂಕ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
"ಅಜೆಂಡಾ 2030 ಕಡೆಗೆ - ಜೀವನ ಮತ್ತು ಜೀವನೋಪಾಯಗಳನ್ನು ಪರಿವರ್ತಿಸುವುದು - ನೈರ್ಮಲ್ಯದ ಪ್ರವೇಶವನ್ನು ಸುಧಾರಿಸುವುದು, ಮಹಿಳೆಯರನ್ನು ಸಬಲೀಕರಣಗೊಳಿಸುವುದು. ಆರ್ಥಿಕ ಸೇರ್ಪಡೆಗಾಗಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ವಸತಿ ಮತ್ತು ಆರೋಗ್ಯ ರಕ್ಷಣೆಯನ್ನು ವಿಸ್ತರಿಸುವುದು ಸೇರಿದಂತೆ" ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಕಾರ್ಯಸೂಚಿಯ ಕ್ರಮಕ್ಕಾಗಿ ಮೋದಿಯವರು ಕರೆ ನೀಡಿದರು ಎಂದು ಜೈಶಂಕರ್ ನೆನಪಿಸಿಕೊಂಡರು.
ಕೋವಿಡ್ ವಿರುದ್ಧ ಭಾರತದ ಹೋರಾಟವನ್ನು ಜನರ ಆಂದೋಲನವನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. "300 ಬಿಲಿಯನ್ ಡಾಲರ್ಗಳ ಆರ್ಥಿಕ ಪ್ಯಾಕೇಜ್. ಜಾಗತಿಕ ಆರ್ಥಿಕತೆಯೊಂದಿಗೆ ಸಂಯೋಜಿಸಲ್ಪಟ್ಟ ಸ್ವಾವಲಂಬಿ ಮತ್ತು ಸ್ಥಿತಿಸ್ಥಾಪಕ ಭಾರತದ ದೃಷ್ಟಿ ಎಂದು ಜೈಶಂಕರ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.