ದೇಶ

'ಮುಖ್ಯಮಂತ್ರಿ ಘರ್ ಘರ್ ರೇಷನ್‌ ಯೋಜನೆ'ಗೆ ದೆಹಲಿ ಸಂಪುಟ ಅನುಮೋದನೆ; ಸಿಎಂ ಕೇಜ್ರೀವಾಲ್

'ಮುಖ್ಯಮಂತ್ರಿ ಘರ್ ಘರ್ ರೇಷನ್‌ ಯೋಜನೆ'ಗೆ ದೆಹಲಿ ಸಂಪುಟ ಅನುಮೋದನೆ; ಸಿಎಂ ಕೇಜ್ರೀವಾಲ್
ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ದೆಹಲಿಯಲ್ಲಿ ಫಲಾನುಭವಿಗಳ ಮನೆಗಳಿಗೆ ಪಡಿತರ ಪೂರೈಸುವ "ಮುಖ್ಯಮಂತ್ರಿ ಘರ್ ಘರ್‌ ರೇಷನ್‌ ಯೋಜನೆ"ಗೆ ಸರ್ಕಾರ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಘೋಷಿಸಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯನ್ನು ಘೋಷಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಪ್ರತಿನಿತ್ಯ ದುಃಖದ ವಿಷಯಗಳೇ ಕೇಳಲು ಸಿಗುತ್ತಿದೆ. ಆದರೆ, ಇಂದು ಜನರಿಗೆ ಸಂತಸದ ವಿಷಯವಿದೆ. ಪ್ರತಿ ರಾಜ್ಯ ಸರ್ಕಾರಗಳು ಕೂಡ ಕೇಂದ್ರ ಸರ್ಕಾರದ ನೆರವಿನಿಂದ ಬಡ ಜನರಿಗೆ ರೇಷನ್‌ ವಿತರಿಸುತ್ತಿದೆ. ಆದರೆ, ಬಡಜನರು ಪಡಿತರ ಪಡೆಯಲು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಒಮ್ಮೆ ಅಂಗಡಿಗಳು ತೆರೆದಿರದಿದ್ದರೆ, ಇನ್ನೊಮ್ಮೆ ಜನರು ಉದ್ದದ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಕೆಲವೊಮ್ಮೆ ಪಡಿತರ ದಾಸ್ತಾನು ಇರುವುದಿಲ್ಲ, ಸರಿಯಾದ ತೂಕ ಮಾಡುವುದಿಲ್ಲ ಎಂದು ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಈ ಎಲ್ಲಾ ಸಮಸ್ಯೆಗಳಪರಿಹಾರಕ್ಕೆ ದೆಹಲಿಯ ಎಎಪಿ ಸರ್ಕಾರ ಜನ ಮನೆ ಬಾಗಿಲಿಗೆ ಪಡಿತರ ವಿತರಿಸಲು ಮುಂದಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.