ಕುಲಭೂಷಣ್ ಪ್ರಕರಣದಲ್ಲಿ ಪಾಕ್ ವಿಡಂಬನಾತ್ಮಕ ವಿಧಾನ ಅನುಸರಿಸುತ್ತಿದೆ: ಭಾರತ ಆರೋಪ 

ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆ ಮಾಜಿ ಉದ್ಯೋಗಿ ಕುಲಭೂಷಣ್ ಜಾಧವ್ ಅವರ ಎಲ್ಲಾ ಕಾನೂನು ಪರಿಹಾರಗಳನ್ನು ಪಾಕಿಸ್ತಾನ ನಿರ್ಬಂಧಿಸಿದೆ ಎಂದು ಭಾರತ ಗುರುವಾರ ಆರೋಪಿಸಿದೆ.
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್

ನವದೆಹಲಿ: ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆ ಮಾಜಿ ಉದ್ಯೋಗಿ ಕುಲಭೂಷಣ್ ಜಾಧವ್ ಅವರ ಎಲ್ಲಾ ಕಾನೂನು ಪರಿಹಾರಗಳನ್ನು ಪಾಕಿಸ್ತಾನ ನಿರ್ಬಂಧಿಸಿದೆ ಎಂದು ಭಾರತ ಗುರುವಾರ ಆರೋಪಿಸಿದೆ.

ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಈ ಪ್ರಕರಣವನ್ನು ನಿಭಾಯಿಸುವಲ್ಲಿ ಪಾಕಿಸ್ತಾನವು "ವಿಡಂಬನಾತ್ಮಕ ವಿಧಾನವನ್ನು" ಅಳವಡಿಸಿಕೊಂಡಿದೆ ಎಂದು ಹೇಳಿದರು, ಈ ವಿಷಯದಲ್ಲಿ ಭಾರತ ಲಭ್ಯವಿರುವ ಆಯ್ಕೆಗಳನ್ನು ಶೋಧಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಕಾನ್ಸುಲರ್ ಪ್ರವೇಶಕ್ಕೆ ಬೇಷರತ್ ಒಪ್ಪಿಗೆ ಸಿಕ್ಕಿಲ್ಲವಾದರೂ ಭಾರತ ಕಡೇ ಪ್ರಯತ್ನ ಎಂಬಂತೆ ಸಂಬಂಧಿತ ದಾಖಲೆಗಳ ಅನುಪಸ್ಥಿತಿಯಲ್ಲಿಜುಲೈ 18 ರಂದು ಭಾರತವು ಅರ್ಜಿಯನ್ನು ಸಲ್ಲಿಸಲು ಪ್ರಯತ್ನಿಸಿತು ಎಂದು ಅವರು ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. "ಆದರೆ, ನಮ್ಮ ಪಾಕಿಸ್ತಾನಿ ವಕೀಲರು ಜಾದವ್ ಪ್ರಕರಣಕ್ಕೆ ಸಂಬಂಧಿಸಿದ ವಕೀಲರ ಮತ್ತು ಪೋಷಕ ದಾಖಲೆಗಳಿಲ್ಲದೆ  ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದರು" 

ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದ ಮರಣದಂಡನೆ ಶಿಕ್ಷೆ ವಿರುದ್ಧ ಜಾಧವ್ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜುಲೈ 20 ಎಂದು ಪಾಕಿಸ್ತಾನ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು ಹಾಧವ್  2017 ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com