ಎಲ್'ಪಿಜಿ ದರ ಏರಿಕೆ: ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಶಾಕ್ ನೀಡಿದ ಸರ್ಕಾರ!
ನವದೆಹಲಿ: ಎಲ್'ಪಿಜಿ ದರವನ್ನು ಏರಿಕೆ ಮಾಡುವ ಮೂಲಗ ಜೂನ್ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಸಾರ್ವಜನಿಕರಿಗೆ ಶಾಕ್ ನೀಡಿದೆ.
ತೈಲ ಮಾರುಕಟ್ಟೆ ಕಂಪನಿಗಳು (ಹೆಚ್'ಪಿ, ಬಿಪಿಸಿಎಲ್, ಐಒಸಿ) ಸಬ್ಸಿಡಿ ರಹಿತ ಎಲ್'ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತೀ ಸಿಲಿಂಡರ್'ಗೆ ರೂ.12 ಹೆಚ್ಚಿಸಿದೆ. ಇದರ ಬಳಿಕ ದೆಹಲಿ ನಿವಾಸಿಗಳು 14.2 ಕೆಜಿ ಸಬ್ಸಿಡಿ ರಹಿತ ಎಲ್'ಪಿಜಿ ಸಿಲಿಂಡರ್ ಬೆಲೆ ರೂ.593ಕ್ಕೆ ಏರಿಕೆಯಾಗಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ಸಿಲಿಂಡರ್ ಬೆಲೆ ರೂ.581.50 ಇತ್ತು.
ಇನ್ನು ಕೋಲ್ಕತಾದಲ್ಲಿ ರೂ.616 ಮುಂಬೈನಲ್ಲಿ 590.50 ಮತ್ತು ಚೆನ್ನೈನಲ್ಲಿ ರೂ.606.50 ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
19 ಕೆಜಿ ಎಲ್'ಪಿಜಿ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗಿದ್ದು, ಇಂದಿನಿಂದ ಹೊಸ ದರಗಳು ಜಾರಿಗೆ ಬರಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್'ಪಿಜಿ ಸಿಲಿಂಡರ್'ನ್ನು ರೂ.1110ರಿಂದ 139.50ಕ್ಕೆ ಹೆಚ್ಚಿಸಲಾಗಿದೆ. ಈ ಮೊಗಲು ಜೂನ್ ನಲ್ಲಿ ಈ ಸಿಲಿಂಡರ್ ದರ ರೂ. 1029.50 ಇತ್ತು. ಇದಲ್ಲದೆ ಇದರ ಬೆಲೆ ಕೋಲ್ಕತಾದಲ್ಲಿ ರೂ.1193.50, ಮುಂಬೈನಲ್ಲಿ 1087.50 ಮತ್ತು ಚೆನ್ನೈನಲ್ಲಿ ರೂ. 1254.00 ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ