ಸಂಚಾರಿ ನಿಮಯ ಉಲ್ಲಂಘಿಸಿದ್ದಕ್ಕೆ 700 ರೂ ದಂಡ: ಬೈಕ್‌ಗೆ ಬೆಂಕಿ ಹಚ್ಚಿದ ಯುವಕ

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಚಾರಿ ಪೊಲೀಸರು 700 ರೂ ದಂಡವನ್ನು ವಿಧಿಸಿದ ನಂತರ ಯುವಕನೊಬ್ಬ ತನ್ನ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜಮ್‍ಶೆಡ್‍ಪುರ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಚಾರಿ ಪೊಲೀಸರು 700 ರೂ ದಂಡವನ್ನು ವಿಧಿಸಿದ ನಂತರ ಯುವಕನೊಬ್ಬ ತನ್ನ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ. 

ಮಾಂಗೋ ಚೌಕ್‌ನಲ್ಲಿ ಈ ಘಟನೆ ನಡೆದಿದ್ದು, ತನ್ನ ಬೈಕ್‌ಗೆ ಎಲ್ಲ ಅಗತ್ಯ ದಾಖಲೆಗಳಿದ್ದರೂ ಸಂಚಾರಿ ಪೊಲೀಸರು 700 ರೂ.ದಂಡ ವಿಧಿಸಿದ್ದಾರೆ ಎಂದು ಯುವಕ ದೂರಿದ್ದಾನೆ. ತಾನು ಹೆಲ್ಮೆಟ್ ಮತ್ತು ಮುಖವಾಡ ಧರಿಸಿದ್ದರೂ ಸಹ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.

ಬೈಕ್‍ಗೆ ಬೆಂಕಿ ಇಟ್ಟ ಯುವಕನನ್ನು ರಾಜೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು ಈತ ನ್ಯೂ ಕುಮ್ರೂಪ್ ಬಸ್ತಿ ಮೂಲದವನಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com