ಹದಗೆಟ್ಟ ಸಂಬಂಧ: 4ಜಿಗೆ ಚೀನಾ ಉಪಕರಣ ಬಳಸದಂತೆ ಬಿಎಸ್ಎನ್ಎಲ್'ಗೆ ಕೇಂದ್ರ ಸೂಚನೆ?

ಲಡಾಖ್ ಗಡಿಯಲ್ಲಿ ಭಾರತದ ಯೋಧರನ್ನು ಚೀನಾ ಹತ್ಯೆಗೈದ ಬೆನ್ನಲ್ಲೇ, ಬಿಎಸ್ಎನ್ಎಲ್ ಜಾಲವನ್ನು 4ಜಿಗೆ ಉನ್ನತೀಕರಿಸುವ ಪ್ರಕ್ರಿಯೆಯಲ್ಲಿ ಚೀನಾ ಸಲಕರಣೆಗಳನ್ನು ಬಳಕೆ ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತದ ಯೋಧರನ್ನು ಚೀನಾ ಹತ್ಯೆಗೈದ ಬೆನ್ನಲ್ಲೇ, ಬಿಎಸ್ಎನ್ಎಲ್ ಜಾಲವನ್ನು 4ಜಿಗೆ ಉನ್ನತೀಕರಿಸುವ ಪ್ರಕ್ರಿಯೆಯಲ್ಲಿ ಚೀನಾ ಸಲಕರಣೆಗಳನ್ನು ಬಳಕೆ ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಬಿಎಸ್ಎನ್ಎಲ್'ಗೆ ಟೆಲಿಕಾಂ ಸಚಿವಾಲಯ ನಿರ್ದೇಶಿಸಲು ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ. 

ಇದೇ ವೇಳೆ, ಚೀನಾ ಕಂಪನಿಗಳ ಮೇಲೆ ಅವಲಂಬನೆ ಕಡಿಮೆ ಮಾಡುವಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೂ ಸರ್ಕಾರ ಕೋರುವ ಸಾಧ್ಯತೆಗಳಿವೆ. ಭಾರ್ತಿ ಏರ್'ಟೆಲ್ ಹಾಗೂ ವೊಡಾಫೋನ್ ಐಡಿಯಾಗಳು ನೆಟ್ವರ್ಕ್ ನಲ್ಲಿ ಚೀನಾದ ಹುವೈ ಕಂಪನಿ ಜೊತೆಗೆ ಕೈಜೋಡಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com