ಕೊರೋನಾ: ಸೋಂಕಿತ ವ್ಯಕ್ತಿಯ ಮೃತದೇಹ ಹೊತ್ತೊಯ್ದು ಪೊಲೀಸರಿಗೆ ಸಂಕಷ್ಟ ಸೃಷ್ಟಿಸಿದ ಕುಟುಂಬ!

ಕೋರೋನಾ ವೈರಸ್ ನಿಂದ ಮೃತಪಟ್ಟಿದ್ದ ವ್ಯಕ್ತಿಯ ದೇಹವನ್ನು ಹೊತ್ತೊಯ್ದು ಕುಟುಂಬವೊಂದು, ಆತಂಕ ಸೃಷ್ಟಿಸಿದ್ದ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋರೋನಾ ವೈರಸ್ ನಿಂದ ಮೃತಪಟ್ಟಿದ್ದ ವ್ಯಕ್ತಿಯ ದೇಹವನ್ನು ಹೊತ್ತೊಯ್ದು ಕುಟುಂಬವೊಂದು, ಆತಂಕ ಸೃಷ್ಟಿಸಿದ್ದ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 

ಕೊರೋನಾ ಸೋಂಕಿತ ವ್ಯಕ್ತಿ ದೆಹಲಿ ಸರ್ ಗಂಗಾರಾಮ್ ಆಸ್ಪತ್ರೆಗೆ ಜೂನ್.1 ರಂದು ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದ್ದರು. 

ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಕಬ್ರಾಸ್ತಾನ್ ಅಹ್ಲೆ ಇಸ್ಲಾಂ ಸ್ಮಶಾನದಲ್ಲಿ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸ್ಮಶಾನದಲ್ಲಿ ವೈರಸ್ ಪೀಡಿತರನ್ನು ಕರೆತರುವ ಸಲುವಾಗಿಯೇ ಪ್ರತ್ಯೇಕ ದ್ವಾರವನ್ನು ತೆರೆಯಲಾಗಿತ್ತು. ಆ್ಯಂಬುಲೆನ್ಸ್ ಮೂಲಕ ಅಧಿಕಾರಿಗಳು ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿದ್ದಾರೆ. ಇದೇ ವೇಳೆ ಮೃತ ವ್ಯಕ್ತಿಯ ಕುಟುಂಬಸ್ಥರು ಸ್ಮಶಾನದ ಬಳಿ ಉತ್ತರಪ್ರದೇಶ ರಾಜ್ಯದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಮತ್ತೊಂದು ಆ್ಯಂಬುಲೆನ್ಸ್'ನ್ನು ತಂದು ನಿಲ್ಲಿಸಿದ್ದಾರೆ. 

ಮೃತದೇಹ ಸ್ಮಶಾನದತ್ತ ಬರುತ್ತಿದ್ದಂತೆಯೇ ಕುಟುಂಬಸ್ಥರು ಬಲವಂತದಿಂದ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ಇರಿಸಿಕೊಂಡು ಮೊರಾದಬಾದ್'ಗೆ ತೆಗೆದುಕೊಂಡು ಹೋಗಿದ್ದಾರೆ. 

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ, ಆ್ಯಂಬುಲೆನ್ಸ್ ತಡೆಯುವಂತೆ ಸೂಚಿಸಿದ್ದಾರೆ. 

ಸುಮಾರು 30 ಮಂದಿಯಿದ್ದ ಕುಟುಂಬವೊಂದು ನಗರದಲ್ಲಿ ಕೆಲ ಕಿಮೀ ವರೆಗೂ ಆ್ಯಂಬುಲೆನ್ಸ್ ನಲ್ಲಿ ಸಂಚಾರ ನಡೆಸಿತ್ತು. ಜಿಲ್ಲಾಡಳಿತ ಮಂಡಳಿಗೆ ಮಾಹಿತಿ ನೀಡಿದ ಬಳಿಕ ಆ್ಯಂಬುಲೆನ್ಸ್'ನ್ನು ತಡೆಹಿಡಿಯಲಾಗಿತ್ತು. ಸಂಜೆ 6 ಗಂಟೆಯವರೆಗೂ ಅಧಿಕಾರಿಗಳು ಸ್ಮಶಾನದಲ್ಲಿಯೇ ಕಾದು ಕುಳಿತಿದ್ದರು. ರಾತ್ರಿ 10.30ರ ಸುಮಾರಿಗೆ ಮೃತದೇಹವನ್ನು ಸ್ಮಶಾನಕ್ಕೆ ತಂದು ಅಂತಿಮ ಸಂಸ್ಕಾರ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com