ಪೂರ್ವ ಲಡಾಕ್ ಗಡಿಯಲ್ಲಿ ಸೇನೆ ನಿಲುಗಡೆ ಮುಂದುವರಿಸಿದರೆ ಚೀನಾ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಭಾರತ

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಿ ಸೇನೆ ನಿಯೋಜಿಸಿ ಘರ್ಷಣೆ ಮಾಡಲು ಯತ್ನಿಸಿದರೆ ಶಾಂತಿಗೆ ಧಕ್ಕೆಯಾಗುವುದಲ್ಲದೆ ವಿಸ್ತಾರವಾಗಿ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ.
ಗಲ್ವಾಮ್ ಕಣಿವೆಯ ಒಂದು ಪ್ರದೇಶ
ಗಲ್ವಾಮ್ ಕಣಿವೆಯ ಒಂದು ಪ್ರದೇಶ

ನವದೆಹಲಿ:ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಿ ಸೇನೆ ನಿಯೋಜಿಸಿ ಘರ್ಷಣೆ ಮಾಡಲು ಯತ್ನಿಸಿದರೆ ಶಾಂತಿಗೆ ಧಕ್ಕೆಯಾಗುವುದಲ್ಲದೆ ವಿಸ್ತಾರವಾಗಿ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ. ಪೂರ್ವ ಲಡಾಕ್ ನಲ್ಲಿ ಸೇನಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಭಾರತ ಚೀನಾಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಈಗ ಇರುವ ಸೇನೆ ನಿಲುಗಡೆಯನ್ನು ಬಗೆಹರಿಸಲು ಇರುವ ಒಂದೇ ಒಂದು ಮಾರ್ಗವೆಂದರೆ ಈಗ ನಿಯೋಜನೆಗೊಂಡಿರುವ ಸೇನೆಯನ್ನು ಚೀನಾ ಹಿಂತೆಗೆದುಕೊಳ್ಳಬೇಕು. ಸೇನೆ ನಿಯೋಜನೆಯನ್ನು ಮುಂದುವರಿಸಿದರೆ ಅದು ಸರಿಯಾದ ಕ್ರಮವಲ್ಲ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಚೀನಾದ ಕ್ರಮ ತಳಮಟ್ಟದಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ನಂಬಿಕೆಗೆ ಧಕ್ಕೆಯನ್ನುಂಟುಮಾಡಿದೆ. ದ್ವಿಪಕ್ಷೀಯ ಸಂಬಂಧ ವಿಚಾರದಲ್ಲಿ ಅದನ್ನು ಯಾವ ರೀತಿ ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು ಚೀನಾ ನಿರ್ಧರಿಸಬೇಕು. ಶಾಂತಿ ಮತ್ತು ಭಾತೃತ್ವ ಕಾಪಾಡುವುದು ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಮುಖ್ಯವಾಗಿದೆ. ಈ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ ಎಂದು ಮಿಸ್ರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com