ಕೋವಿಡ್-19: ದೇಶದಲ್ಲಿ ಸುಮಾರು 3 ಲಕ್ಷ ಜನ ಗುಣಮುಖ, ಶೇ.58ಕ್ಕೂ ಹೆಚ್ಚು ಚೇತರಿಕೆ ಪ್ರಮಾಣ- ಡಾ. ಹರ್ಷವರ್ಧನ್

ದೇಶದಲ್ಲಿ ಕೊರೋನಾವೈರಸ್ ನಿಂದ ಸುಮಾರು 3 ಲಕ್ಷ ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ,58ಕ್ಕಿಂತಲೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. 
ಕೇಂದ್ರ ಸಚಿವ ಹರ್ಷವರ್ಧನ್
ಕೇಂದ್ರ ಸಚಿವ ಹರ್ಷವರ್ಧನ್
Updated on: 

ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ನಿಂದ ಸುಮಾರು 3 ಲಕ್ಷ ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.58ಕ್ಕಿಂತಲೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. 

ಸಾವಿನ ಪ್ರಮಾಣ ಶೇ.3ಕ್ಕೂ ಕಡಿಮೆ ಇದೆ.ದ್ವಿಗುಣಗೊಳ್ಳುವಿಕೆ ಪ್ರಮಾಣ 19 ದಿನಗಳ ಸನಿಹಕ್ಕೆ ಇಳಿದಿದೆ, ಲಾಕ್‌ ಡೌನ್‌ಗೆ ಮೊದಲಿಗೆ ಮೂರು ದಿನಗಳಲ್ಲಿ ಇತ್ತು ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ರೋಗಿಗಳು ಗುಣಮುಖರಾಗುತ್ತಿರುವಂತೆ ಕಳೆದ 24 ಗಂಟೆಗಳಲ್ಲಿ 18 ಸಾವಿರದ 552 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 5 ಲಕ್ಷ ಗಡಿಯನ್ನು ದಾಟಿದೆ. ಸಾವಿನ ಸಂಖ್ಯೆ 15 ಸಾವಿರದ 685ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com