ಪೊಲೀಸರು ಕಾನೂನು ಜಾರಿಗೊಳಿಸಲು ವಿಫಲರಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ: ಅಜಿತ್ ದೋವಲ್ 

ಪೊಲೀಸರು ಕಾನೂನುಗಳನ್ನು ಜಾರಿಗೊಳಿಸಲು ವಿಫಲರಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.
ಅಜಿತ್ ದೋವಲ್
ಅಜಿತ್ ದೋವಲ್

ಗುರುಗ್ರಾಮ್; ಪೊಲೀಸರು ಕಾನೂನುಗಳನ್ನು ಜಾರಿಗೊಳಿಸಲು ವಿಫಲರಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.


ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಕಾನೂನು ರೂಪಿಸುವುದು ಒಂದು ಪವಿತ್ರವಾದ ಕೆಲಸ. ಅದನ್ನು ಜಾರಿಗೆ ತರಬೇಕಾದವರು ಪೊಲೀಸರು. ಅದನ್ನು ಜಾರಿಗೆ ತರುವಲ್ಲಿ ನೀವು ವಿಫಲವಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ. ಕಾನೂನನ್ನು ತಳಮಟ್ಟದಿಂದ ಜಾರಿಗೆ ತಂದಷ್ಟು ಅದು ಒಳ್ಳೆಯದು ಎಂದು ಅಜಿತ್ ದೋವಲ್ ಇಂದು ಗುರುಗ್ರಾಮ್ ನಲ್ಲಿ ಯುವ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುವಾಗ ಹೇಳಿದರು.


ಪೊಲೀಸ್ ಸಿಬ್ಬಂದಿ ನ್ಯಾಯಯುತ ಮತ್ತು ವಿಶ್ವಾಸಾರ್ಹರಾಗಿರಬೇಕು ಎಂದು ನಾವು ಹೇಗೆ ನಿರೀಕ್ಷಿಸುತ್ತೇವೆಯೋ ಜನರು ಅವರನ್ನು ನ್ಯಾಯಯುತ ಮತ್ತು ವಿಶ್ವಾಸಾರ್ಹತೆಯಿಂದ ನೋಡಬೇಕು ಎಂದರು.


ಪೊಲೀಸರು ಮೊದಲು ಸಮಸ್ಯೆಯನ್ನು ಗುರುತಿಸಿ ನಂತರ ಸಮಸ್ಯೆಯನ್ನು ವ್ಯಾಖ್ಯಾನಿಸಬೇಕು ಮತ್ತು ಅದಕ್ಕೆ ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಬೇಕು, ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂದು ಯೋಚಿಸಬೇಕು. ಬೀಟ್ ಕಾನ್‌ಸ್ಟೆಬಲ್ ಗಳು ತಂತ್ರಜ್ಞಾನದ ಗ್ಯಾಜೆಟ್‌ಗಳನ್ನು ಬಳಸುವಂತಾಗಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com