ಕೊರೋನಾ ವೈರಸ್ ಭೀತಿ: ಅಫ್ಘಾನಿಸ್ತಾನ, ಫಿಲಿಪೈನ್ಸ್, ಮಲೇಷ್ಯಾದ ಪ್ರಯಾಣಿಕರಿಗೆ ಭಾರತ ನಿಷೇಧ

ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹರಡುವುದನ್ನು ತಡೆಯಲು ಭಾರತ ಮಂಗಳವಾರ ಹಲವು ಕ್ರಮಗಳನ್ನು ಕೈಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹರಡುವುದನ್ನು ತಡೆಯಲು ಭಾರತ ಮಂಗಳವಾರ ಹಲವು ಕ್ರಮಗಳನ್ನು ಕೈಗೊಂಡಿದೆ. 

ಅಫ್ಘಾನಿಸ್ತಾನ, ಫಿಲಿಪೈನ್ಸ್ ಹಾಗೂ ಮಲೇಷ್ಯಾದಿಂದ ಭಾರತ ಪ್ರವೇಶಿಸುವ ಪ್ರಯಾಣಿಕರ ಮೇಲೆ ಮಂಗಳವಾರ ಮಧ್ಯಾಹ್ನ ಮೂರು ಗಂಟೆಯಿಂದ ಪೂರ್ಣ ನಿಷೇಧ ವಿಧಿಸಿದೆ. ಈ ತಿಂಗಳ ೩೧ರವರೆಗೆ ಈ ನಿಷೇಧ ಆದೇಶ ಜಾರಿಯಲ್ಲಿರಲಿದ್ದು ಪರಿಸ್ಥಿತಿ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಭಾರತ ಈಗಾಗಲೇ ಐರೋಪ್ಯ ದೇಶಗಳು, ಟರ್ಕಿ ಹಾಗೂ ಬ್ರಿಟನ್‌ನಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಷೇಧ ಹೇರಿದೆ. ಈ ಮಾರ್ಗಸೂಚಿಗಳಿಗೆ ಅನುಸಾರವಾಗಿ ಯಾವುದೇ ವಿಮಾನಯಾನ ಸಂಸ್ಥೆಗಳು ಈ ದೇಶಗಳ ಪ್ರಯಾಣಿಕರನ್ನು ಭಾರತಕ್ಕೆ ಕರೆತರಲು ಅನುಮತಿಸುವುದಿಲ್ಲ. ಮತ್ತೊಂದೆಡೆ, ಕರೋನಾದಿಂದಾಗಿ ಮಹಾರಾಷ್ಟ್ರ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೬೪ ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದು, ದೇಶದಲ್ಲಿ ಈ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com