ತೆಲಂಗಾಣದಲ್ಲಿ ಏಳು ವಿದೇಶಿಯರಿಗೆ ಕೊರೋನಾ ಪಾಸಿಟಿವ್ :ದೇಶದಲ್ಲಿ ಒಟ್ಟಾರೇ ಪ್ರಕರಣಗಳ ಸಂಖ್ಯೆ 169ಕ್ಕೆ ಏರಿಕೆ

ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೆಲಂಗಾಣದಲ್ಲಿ ಏಳು ವಿದೇಶಿಯರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.ಮಹಾರಾಷ್ಟ್ರದಲ್ಲಿ 45ಜನರಲ್ಲಿ ಈ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಈ ಸೋಂಕು ತಗುಲಿದವರ ಸಂಖ್ಯೆ 169ಕ್ಕೆ ಏರಿಕೆ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೆಲಂಗಾಣದಲ್ಲಿ ಏಳು ವಿದೇಶಿಯರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.ಮಹಾರಾಷ್ಟ್ರದಲ್ಲಿ 45ಜನರಲ್ಲಿ ಈ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಈ ಸೋಂಕು ತಗುಲಿದವರ ಸಂಖ್ಯೆ 169ಕ್ಕೆ ಏರಿಕೆ ಆಗಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ 50 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಪಾಸಿಟಿವ್  ಕಂಡುಬಂದಿದೆ. ಈತ ದುಬೈನಿಂದ ಬಂದಿದ್ದ ಎನ್ನಲಾಗಿದೆ. ಮತ್ತೊಂದೆಡೆ  ಪಿಲಿಫೈನ್ಸ್ ನಿಂದ ಬಂದಿದ್ದ ಪಿಂಪ್ರಿ ಚಿಂಚ್ ವಾಡ್ ನ ವ್ಯಕ್ತಿಯೊಬ್ಬರಲ್ಲಿಯೂ ಈ ಸೋಂಕು ಪತ್ತೆಯಾಗಿದೆ. 

ಮತ್ತೊಂದೆಡೆ ಪ್ರತ್ಯೇಕ ವಾರ್ಡ್ ನಿಂದ ಪರಾರಿಯಾಗಿದ್ದ ಕೇರಳ ರಾಜ್ಯದ ಪೊಲೀಸರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ತಿರುವನಂತಪುರಂನ ಅಂಬುರಿ ಮೂಲದ ಈ ಪೋಲೀಸ್ ಇತ್ತೀಚೆಗೆ ರಾಣಿಗೆ ಹೋಗಿದ್ದರು ಎಂಬುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದ ನಂತರ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು. 

ವಿದೇಶದಲ್ಲಿರುವ 276 ಭಾರತೀಯರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com