ಸಂಗ್ರಹ ಚಿತ್ರ
ದೇಶ
ಕೊರೋನಾ ವೈರಸ್ ಪತ್ತೆ: ಮೊದಲ ಖಾಸಗಿ ಸಂಸ್ಥೆಗೆ ಕೇಂದ್ರ ಸಮ್ಮತಿ
ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕು ಪತ್ತೆ ಪರೀಕ್ಷೆಗೆ ಸ್ವಿಜರ್ ಲೆಂಡ್ ಮೂಲದ ಪ್ರಯೋಗಾಲಯವೊಂದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕು ಪತ್ತೆ ಪರೀಕ್ಷೆಗೆ ಸ್ವಿಜರ್ ಲೆಂಡ್ ಮೂಲದ ಪ್ರಯೋಗಾಲಯವೊಂದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಸ್ವಿಜರ್ ಲೆಂಡ್ ಮೂಲದ ರೋಚ್ ಡಯಾಗ್ನಸ್ಟಿಕ್ ಪ್ರಯೋಗಾಲಯಕ್ಕೆ ಸರ್ಕಾರ ಅನುಮತಿ ನೀಡಿದ್ದು, ಆ ಮೂಲಕ ಸೋಂಕು ಪತ್ತೆ ಪರೀಕ್ಷೆಗೆ ಅನುಮತಿ ಪಡೆದ ದೇಶದ ಮೊದಲ ಪ್ರಯೋಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಈ ಅನುಮತಿ ನೀಡಿದ್ದು, ಬೆನ್ನಲ್ಲೇ ಹಲವು ಕಂಪನಿಗಲು ಅರ್ಜಿ ಸಲ್ಲಿಸಿವೆ. ಮಂಗಳವಾರ ಕೇಂದ್ರ ಸರ್ಕಾರ ಖಾಸಗಿ ಲ್ಯಾಬ್ ಗಳಿಗೂ ಸೋಂಕು ಪತ್ತೆ ಪರೀಕ್ಷೆ ನಡೆಸಲು ಅವಕಾಶ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ