ನವದೆಹಲಿ: ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಿದ್ದ ಭಾರತ ಇದೀಗ ಎಲ್ಲಾ ದೇಶಿಯ ವಿಮಾನ ಹಾರಾಟವನ್ನು ಮಾರ್ಚ್ 24ರ ಮಧ್ಯರಾತ್ರಿಯಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದು, ಮಾ.24 ರಂದು 23:59 ಗಂಟೆಗಳಿಂದ ಎಲ್ಲಾ ದೇಶಿಯ ಹಾಗೂ ವಾಣಿಜ್ಯ ವಿಮಾನಗಳನ್ನೂ ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದೆ.
24 ರ ಮಾರ್ಚ್ 11:59 ಕ್ಕೂ ಮುನ್ನ ಎಲ್ಲಾ ವಿಮಾನಗಳು ಲ್ಯಾಂಡ್ ಆಗುವಂತೆ ತಮ್ಮ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳುವಂತೆ ಎಲ್ಲಾ ವಿಮಾನ ಸಂಸ್ಥೆಗಳಿಗೂ ಈಗಾಗಲೇ ಸೂಚನೆ ನೀಡಲಾಗಿದೆ.
ಆದರೆ ಸರಕು ಸಾಗಿಸುವ ವಿಮಾನಗಳಿಗೆ ಮಾತ್ರ ವಿನಾಯ್ತಿ ನೀಡಲಾಗಿದೆ. ಇದಕ್ಕೂ ಮುನ್ನ ಮಾ.22 ರಂದು ಭಾರತೀಯ ರೈಲ್ವೆ ಇಲಾಖೆ ಸಹ ಮಾ.31 ವರೆಗೆ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಿತ್ತು.
Advertisement