ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್

ಕೋವಿಡ್-19 ಸಮುದಾಯದಲ್ಲಿ ಹರಡಿಲ್ಲ, ಕೇವಲ ಓರ್ವನ ಬೇಜವಾಬ್ದಾರಿಯೂ ವೈರಸ್ ಉಲ್ಬಣಕ್ಕೆ ಕಾರಣವಾದೀತು: ಕೇಂದ್ರ 

ಭಾರತದಲ್ಲಿ 24 ಗಂಟೆಗಳಲ್ಲಿ ಕೋವಿಡ್-19 ಸೋಂಕಿತರ ಹೊಸ 92 ಪ್ರಕರಣಗಳು ವರದಿಯಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ನವದೆಹಲಿ: ಭಾರತದಲ್ಲಿ 24 ಗಂಟೆಗಳಲ್ಲಿ ಕೋವಿಡ್-19 ಸೋಂಕಿತರ ಹೊಸ 92 ಪ್ರಕರಣಗಳು ವರದಿಯಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಮಾ.30 ರಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಈವರೆಗೂ ಕೊರೋನಾ ವೈರಸ್ ಸಮುದಾಯದಲ್ಲಿ ಹರಡಿಲ್ಲ. ಅಂತಹ ಸ್ಥಿತಿ ಎದುರಾದರೆ ನಾವೇ ತಿಳಿಸುತ್ತೇವೆ ಎಂದು ಹೇಳಿದ್ದಾರೆ. 

ಲಾಕ್ ಡೌನ್ ನಂತರದ ಪರಿಸ್ಥಿತಿಗಳನ್ನು ಗಮನಿಸಿದರೆ ನಾವು ಸರಿಯಾದ ಹಾದಿಯಲ್ಲಿರುವುದು ತಿಳಿಯುತ್ತಿದೆ. ಆದರೆ ಈ ಹಂತದಲ್ಲಿ ಕೇವಲ ಶೇ.1 ರಷ್ಟು ಜನರು ಲಾಕ್ ಡೌನ್ ಪಾಲಿಸದೇ ಇದ್ದಲ್ಲಿ, ಕೇವಲ ಓರ್ವ ವ್ಯಕ್ತಿಯಿಂದ ನಮ್ಮ ಎಲ್ಲಾ ಪ್ರಯತ್ನಗಳೂ ವ್ಯರ್ಥವಾಗಲಿದೆ. ಕೇವಲ ಒಬ್ಬ ವ್ಯಕ್ತಿಯ ಬೇಜವಾಬ್ದಾರಿತನದಿಂದ ಈ ವೈರಸ್ ಉಲ್ಬಣವಾಗುವ ಸಾಧ್ಯತೆಗಳಿವೆ ಎಂದು ಲವ್ ಅಗರ್ವಾಲ್ ಎಚ್ಚರಿಸಿದ್ದಾರೆ. 

ಕೋವಿಡ್-10 ರ 100 ಪ್ರಕರಣಗಳಿಂದ 1000 ಪ್ರಕರಣದವರೆಗೆ ಏರಿಕೆಯಾವುದಕ್ಕೆ 12 ದಿನಗಳು ಬೇಕಾಯಿತು, ಬೇರೆ ರಾಷ್ಟ್ರಗಳಲ್ಲಿ ಇದು ಇನ್ನೂ ತ್ವರಿತವಾಗಿ ವಿಸ್ತರಿಸಿದೆ. ನಾವು ಒಂದು ಹಂತಕ್ಕೆ ಸಕಾರಾತ್ಮಾಕ ಫಲಿತಾಂಶ ಪಡೆದಿದ್ದೇವೆ ಎಂದು ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ 3.34 ಲಕ್ಷ ಕೊರೋನಾ ವೈರಸ್ ವಿರುದ್ದ ಹೋರಾಡಲು ಪಿಪಿಇ ಗಳು ಲಭ್ಯವಿದೆ. 60,000 ಪಿಪಿಇಗಳನ್ನು ಕೇಂದ್ರ ಸರ್ಕಾರ ಉತ್ಪಾದಿಸಿ ಪೂರೈಕೆ ಮಾಡಿದೆ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ 10,000 ಪಿಪಿಇಗಳನ್ನು ಚೀನಾದಿಂದ ವ್ಯವಸ್ಥೆ ಮಾಡಿ ಪೂರೈಕೆ ಮಾಡಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನ ಆರ್ ಗಂಗಾ ಖೇದ್ಕರ್ ಮಾತನಾಡಿ, ಈವರೆಗೂ 38,442 ಪರೀಕ್ಷೆಗಳನ್ನು ಮಾಡಲಾಗಿದೆ. ಭಾನುವಾರ ಒಂದೇ ದಿನ 3,501 ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ ಮೂರು ದಿನಗಳಲ್ಲಿ 1,334 ಪರೀಕ್ಷೆಗಳನ್ನು ನಡೆಸಲಾಗಿದೆ. ನಾವು ಪರೀಕ್ಷೆ ನಡೆಸುವ ನಮ್ಮ ಸಂಪೂರ್ಣ ಸಾಮರ್ಥ್ಯದ ಶೇ.30 ರಷ್ಟು ಕಡಿಮೆ ಇದ್ದೇವೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com