ದೇಶ

ರಾಜಸ್ಥಾನ: ಊರು ತಲುಪಲು 200 ಕಿ.ಮೀ ನಡೆದು, ಮರದ ಮೇಲೆ ಸ್ವಯಂ ಕ್ವಾರಂಟೈನ್ ಗೆ ಒಳಗಾದ ಕಾರ್ಮಿಕ!

ರಾಜಸ್ಥಾನ: ಊರು ತಲುಪಲು 200 ಕಿ.ಮೀ ನಡೆದು, ಮರದ ಮೇಲೆ ಸ್ವಯಂ ಕ್ವಾರಂಟೈನ್ ಗೆ ಒಳಗಾದ ಕಾರ್ಮಿಕ!
ಸಾಂದರ್ಭಿಕ ಚಿತ್ರ
Published On :

ಜೈಪುರ್: ಕೊರೋನಾ ಲಾಕ್ ಡೌನ್ ನಡುವೆ 24 ವರ್ಷದ ವಲಸೆ ಕಾರ್ಮಿಕನೊಬ್ಬ ತನ್ನ ಊರು ತಲುಪುವುದಕ್ಕಾಗಿ ಸುಮಾರು 200 ಕಿ. ಮೀ. ನಡೆದುಕೊಂಡು ಹೋಗಿ, 14 ದಿನಗಳ ಕಾಲ ಒಂದು ಮರದಲ್ಲಿಯೇ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಏಪ್ರಿಲ್ 16ರಂದು ಅಜ್ಮೆರ್ ಜಿಲ್ಲೆಯ ಕಿಶನ್ ಘಡದಿಂದ ನಡೆದುಕೊಂಡು ಜಹಾಜಪುರ್ ತೆಹ್ಸಿಲ್ ನ ಶೆರ್ಪುರ ಗ್ರಾಮ ತಲುಪಿದ ಕಮಲೇಶ್ ಮೀನಾ ಅವರಿಗೆ ಗ್ರಾಮಸ್ಥರು ಕೊವಿಡ್-19 ಭೀತಿಯಿಂದ ಊರು ಪ್ರವೇಶಿಸುವುದು ಬೇಡ ಎಂದು ತಡೆದಿದ್ದಾರೆ. ಹೀಗಾಗಿ ಮೀನಾ ಅವರು ಊರ ಹೊರಗಿನ ಒಂದು ಮರದಲ್ಲಿ 'ಮಚಾನ್' ನಿರ್ಮಿಸಿಕೊಂಡು ಅಲ್ಲಿಯೇ 14 ದಿನ ಕಳೆದಿದ್ದಾರೆ.

ಗ್ರಾಮಸ್ಥರು ಮತ್ತು ಆತನ ಕುಟುಂಬಸ್ಥರ ಮರದಲ್ಲಿ ಮಚಾನ್ ನಿರ್ಮಿಸಲು ನೆರವಾಗಿದ್ದಾರೆ ಮತ್ತು ಆತನಿಗೆ ಅಲ್ಲಿಯೇ ಆಹಾರ. ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

14 ದಿನಗಳ ಕ್ವಾರಂಟೈನ್ ನಂತರ ವೈದ್ಯಕೀಯ ತಂಡ ಗ್ರಾಮಕ್ಕೆ ಭೇಟಿ ನೀಡಿ ಮೀನಾ ಅವರಿಗೆ ಕೊವಿಡ್-19 ಪರೀಕ್ಷೆ ಮಾಡಿದ್ದಾರೆ. ಮೀನಾ ಅವರಿಗೆ ನೆಗಟಿವ್ ಬಂದಿದ್ದು, ಈಗ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.