ಭಾರತದಲ್ಲಿರುವ ನಾಗರಿಕರು ತಾಯ್ನಾಡಿಗೆ ಬರಲಿಚ್ಛಿಸಿದರೆ ಕರೆಸಿಕೊಳ್ಳಲು ಸಿದ್ಧ ಎಂದ ಚೀನಾ

ತಾಯ್ನಾಡಿಗೆ ಮರಳಲು ಇಚ್ಛಿಸುವ ನಾಗರಿಕರನ್ನು ಕರೆಸಿಕೊಳ್ಳಲು ಚೀನಾ ಮುಂದಾಗಿದೆ. ಈ ಬಗ್ಗೆ ಚೀನಾ ರಾಯಭಾರ ಕಚೇರಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದು ತಮ್ಮ ದೇಶಕ್ಕೆ ಹಿಂತಿರುಗಲು ಬಯಸುವ ನಾಗರಿಕರು ತಮ್ಮ ಸ್ವಂತ ಖರ್ಚಿನಲ್ಲಿ ವಿಶೇಷ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಬೇಕೆಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ತಾಯ್ನಾಡಿಗೆ ಮರಳಲು ಇಚ್ಛಿಸುವ ನಾಗರಿಕರನ್ನು ಕರೆಸಿಕೊಳ್ಳಲು ಚೀನಾ ಮುಂದಾಗಿದೆ. ಈ ಬಗ್ಗೆ ಚೀನಾ ರಾಯಭಾರ ಕಚೇರಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದು ತಮ್ಮ ದೇಶಕ್ಕೆ ಹಿಂತಿರುಗಲು ಬಯಸುವ ನಾಗರಿಕರು ತಮ್ಮ ಸ್ವಂತ ಖರ್ಚಿನಲ್ಲಿ ವಿಶೇಷ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಬೇಕೆಂದು ಹೇಳಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸಂಬಂಧಪಟ್ಟ ಇಲಾಖೆಗಳ ಸಂಯೋಜಿತ ವ್ಯವಸ್ಥೆಗಳ ಮೂಲಕ ಭಾರತದಲ್ಲಿರುವ ಚೀನಾದ ರಾಜತಾಂತ್ರಿಕ ಮತ್ತು ದೂತಾವಾಸ ಇಲಾಖೆಗಳು ಇಲ್ಲಿರುವ ಚೀನಾ ವಿದ್ಯಾರ್ಥಿಗಳು, ಪ್ರವಾಸಿಗರು, ತಾತ್ಕಾಲಿಕ ವೀಸಾ ಮೇಲೆ ಬಂದಿರುವ ಉದ್ಯಮಿಗಳಿಗೆ ಈ ಸಂಕಷ್ಟದ ಸಮಯದಲ್ಲಿ ನೆರವು ನೀಡಿ ಚೀನಾಕ್ಕೆ ಹೋಗಲು ಸಹಾಯ ಮಾಡಲಿದೆ ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.

ಸಿಕ್ಕಿಮ್ ಮತ್ತು ಲಡಾಕ್ ನಲ್ಲಿ ಸೇನೆ ನಿಯೋಜನೆ ಸಂದರ್ಭದಲ್ಲಿ ಭಾರತ ಸರ್ಕಾರ ಈ ನಿರ್ಣಯ ಕೈಗೊಂಡಿರುವುದು ಮಹತ್ವವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com