ಕೊರೋನಾ ವೈರಸ್: ಅನಿವಾಸಿ ಭಾರತೀಯರ ಕರೆತರಲು ವಂದೇ ಭಾರತ್ ಮಿಷನ್ ವಿಸ್ತರಣೆ!

ಮಾರಕ ಕೊರೋನಾ ವೈರಸ್ ನಿಂದಾಗಿ ವಿದೇಶದಲ್ಲಿ ನಿರಾಶ್ರಿತರಾಗಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ವಂದೇ ಭಾರತ್ ಮಿಷನ್ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, 2ನೇ ಹಂತದಲ್ಲಿ 1 ಲಕ್ಷಕ್ಕೂ ಅಧಿಕ ಅನಿವಾಸಿ  ಭಾರತೀಯರನ್ನು ಕರೆತರುವ ಗುರಿ ಹೊಂದಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ ವಿದೇಶದಲ್ಲಿ ನಿರಾಶ್ರಿತರಾಗಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ವಂದೇ ಭಾರತ್ ಮಿಷನ್ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, 2ನೇ ಹಂತದಲ್ಲಿ 1 ಲಕ್ಷಕ್ಕೂ ಅಧಿಕ ಅನಿವಾಸಿ  ಭಾರತೀಯರನ್ನು ಕರೆತರುವ ಗುರಿ ಹೊಂದಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮೊದಲ ಹಂತದ ಯೋಜನೆಯಲ್ಲಿ 45,000ಕ್ಕೂ ಹೆಚ್ಚು ಭಾರತೀಯರನ್ನು ವಿದೇಶದಿಂದ ಸ್ವದೇಶಕ್ಕೆ ಕರೆತರಲಾಗಿತ್ತು. ಇದೀಗ 2ನೇ ಹಂತದಲ್ಲಿ 1 ಲಕ್ಷಕ್ಕೂ ಅನಿವಾಸಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಬಗ್ಗೆ  ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ ಜೂನ್ 13 ರವರೆಗೆ 1,00,000 ಜನರನ್ನು ಭಾರತಕ್ಕೆ ಕರೆತರಲಾಗುವುದು ಎಂದು ಹೇಳಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, 'ಲ್ಯಾಟಿನ್ ಅಮೆರಿಕ, ಕೆರಿಬಿಯನ್, ಆಫ್ರಿಕಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಉಳಿದುಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತಕ್ಕೆ  ಹಾರಾಟ ನಡೆಸುತ್ತಿರುವ ವಿದೇಶಿ ವಿಮಾನಗಳ ಸಹಾಯ ಪಡೆದುಕೊಳ್ಳುವ ಮೂಲಕ ಈ ಕಾರ್ಯವನ್ನು ಮಾಡಲಾಗುತ್ತಿದೆ. ಗುರುವಾರ ಮಧ್ಯಾಹ್ನದವರೆಗೆ ಒಟ್ಟು 45,216 ಭಾರತೀಯರನ್ನು ಮರಳಿ ಕರೆತರಲಾಯಿತು. ಅವರಲ್ಲಿ 8,069 ವಲಸೆ ಕಾರ್ಮಿಕರು, 7,656 ವಿದ್ಯಾರ್ಥಿಗಳು ಮತ್ತು  5,107 ವೃತ್ತಿಪರರು ಸೇರಿದ್ದಾರೆ. ಸುಮಾರು 5,000 ಭಾರತೀಯರು ನೇಪಾಳ ಮತ್ತು ಬಾಂಗ್ಲಾದೇಶದಿಂದ ಭೂ ಗಡಿಯ ಮೂಲಕ ಮರಳಿದ್ದಾರೆ ಎಂದು ಹೇಳಿದರು.

ಮೇ 7ರಂದು ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯ ಮೊದಲ ಹಂತವನ್ನು ಆರಂಭಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com