ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಣ, ತೋಳ್ಬಲ, ವಂಚನೆಯಿಂದ ಎನ್ ಡಿಎ ಗೆಲುವು: ತೇಜಸ್ವಿ ಯಾದವ್

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ರಾಜ್ಯದ ಜನರ ಬೆಂಬಲ ಗಳಿಸಿದೆ ಆದರೆ, ಎನ್ ಡಿಎ ಹಣ, ತೋಳ್ಬಲ ಮತ್ತು ವಂಚನೆಯ ಮೂಲಕ ಗೆಲುವು ಸಾಧಿಸಿದೆ ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.
ತೇಜಸ್ವಿ ಯಾದವ್
ತೇಜಸ್ವಿ ಯಾದವ್
Updated on

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ರಾಜ್ಯದ ಜನರ ಬೆಂಬಲ ಗಳಿಸಿದೆ ಆದರೆ, ಎನ್ ಡಿಎ ಹಣ, ತೋಳ್ಬಲ ಮತ್ತು ವಂಚನೆಯ ಮೂಲಕ ಗೆಲುವು ಸಾಧಿಸಿದೆ ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್,  ಜೆಡಿಯು ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದು, ಒಂದು ವೇಳೆ ಅವರಿಗೆ ಆತ್ಮಸಾಕ್ಷಿ ಇದ್ದರೆ, ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕು ಎಂದರು.

ಮಹಾಘಟ ಬಂಧನ್ ಕ್ಕಿಂತಲೂ ಕೇವಲ 12, 270 ಹೆಚ್ಚಿನ ಮತಗಳು ಹಾಗೂ 15 ಕ್ಕೂ ಹೆಚ್ಚಿನ ಸ್ಥಾನಗಳನ್ನು  ಎನ್ ಡಿಎ ಮೈತ್ರಿಕೂಟ ಗಳಿಸಿರುವುದು ಅಶ್ಚರ್ಯಕರವಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು. 

ಚುನಾವಣಾ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆರ್ ಜೆಡಿ ನಾಯಕ, ಆರಂಭದಲ್ಲಿ ಎಣಿಕೆ ಕಾರ್ಯ ಮಾಡದೆ ಕೊನೆಯಲ್ಲಿ ಮಾಡಲಾದ ಎಲ್ಲಾ ಕ್ಷೇತ್ರಗಳ ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಒತ್ತಾಯಿಸಿದರು.

ಕಡಿಮೆ ಅಂತರದಲ್ಲಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ 900ಕ್ಕೂ ಹೆಚ್ಚು ಅಂಚೆ ಮತಗಳನ್ನು ಅಮಾನ್ಯ ಮಾಡಲಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com