ಭಾರತದ ಹೆಸರು ಹೇಳಿದಾಕ್ಷಣ ಪಾಕಿಸ್ತಾನ "ನಿರೀಕ್ಷಿತ ಪ್ರತಿಕ್ರಿಯೆ"ಯನ್ನೇ ನೀಡುತ್ತೆ: ಯುಎನ್ ಪ್ರತಿನಿಧಿ ಟಿಎಸ್ ತಿರುಮೂರ್ತಿ

ವಿಶ್ವಸಂಸ್ಥೆಯಲ್ಲಿ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. 
ಉಲ್ಲೇಖಿಸಿದಾಕ್ಷಣ 'ಊಹಿಸಬಹುದಾದ ಪ್ರತಿಕ್ರಿಯೆ'ಯನ್ನೇ ನೀಡುತ್ತೆ ಪಾಕಿಸ್ತಾನ: ಯುಎನ್ ಪ್ರತಿನಿಧಿ ಟಿಎಸ್ ತಿರುಮೂರ್ತಿ
ಉಲ್ಲೇಖಿಸಿದಾಕ್ಷಣ 'ಊಹಿಸಬಹುದಾದ ಪ್ರತಿಕ್ರಿಯೆ'ಯನ್ನೇ ನೀಡುತ್ತೆ ಪಾಕಿಸ್ತಾನ: ಯುಎನ್ ಪ್ರತಿನಿಧಿ ಟಿಎಸ್ ತಿರುಮೂರ್ತಿ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. 

ವಿಶ್ವಸಂಸ್ಥೆ ಭದ್ರತಾ ಮಂಡಳಿ ಇರುವುದು ಘನ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದಕ್ಕಾಗಿಯೇ ಹೊರತು ಕ್ಷುಲ್ಲಕ ಆರೋಪಗಳನ್ನು ಮಾಡುವುದಕ್ಕೆ ಅಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ. 

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪ್ರಾತಿನಿಧ್ಯದ ಬಗ್ಗೆ ಉದ್ಭವವಾದ ಪ್ರಶ್ನೆಗಳ ಬಗ್ಗೆ ಮಾತನಾಡಿದ ಟಿಎಸ್ ತಿರುಮೂರ್ತಿ, ಪಾಕ್ ನ ರಾಯಭಾರಿ ಮುನಿರ್ ಅಕ್ರಮ್ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, 

ಭಾರತದ ಬಗ್ಗೆ ಏನಾದರೂ ಉಲ್ಲೇಖಿಸುತ್ತಿದ್ದಂತೆಯೇ ನಿರೀಕ್ಷಿತ ಉತ್ತರವನ್ನೇ ನೀಡುವ ಪಾಕಿಸ್ತಾನದ ಪ್ರತಿನಿಧಿ ಮಾಡಿರುವ ಅಸಂಬದ್ಧ ಹಾಗೂ ಅಪ್ರಸ್ತುತ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿ ಸಭೆಯ ಸಮಯವನ್ನು ಹಾಳುಮಾಡುವುದಕ್ಕೆ ಇಚ್ಛಿಸುವುದಿಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 

ವಿಶ್ವಸಂಸ್ಥೆಯಲ್ಲಿ ಪ್ರಸ್ತುತ 5 ಶಾಶ್ವತ ಪ್ರತಿನಿಧಿಗಳಿದ್ದು 10- ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳಿವೆ. ಶಾಶ್ವತ ಸದಸ್ಯ ರಾಷ್ಟ್ರಗಾಳ ಸಂಖ್ಯೆಯನ್ನು ಏರಿಕೆ ಮಾಡುವುದಕ್ಕೆ ಚಿಂತನೆ ನಡೆದಿದ್ದು ಭಾರತವೂ ಪ್ರಬಲ ಆಕಾಂಕ್ಷಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com