ರಾಜಕೀಯ ತೊರೆದು ಆತ್ಮಹತ್ಯೆಗೆ ಸಿದ್ಧ, ಬಿಜೆಪಿಗೆ ಸೇರಲಾರೆ: ಸೌಗತ ರಾಯ್

ಪಶ್ಚಿಮ ಬಂಗಾಳದ ಕನಿಷ್ಠ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು , ಬಿಜೆಪಿಗೆ ಬರಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಟಿಎಂಸಿ ಸಂಸದ ಸೌಗತ ರಾಯ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ತೊರೆದು ಆತ್ಮಹತ್ಯೆಗೆ ಸಿದ್ಧ, ಬಿಜೆಪಿಗೆ ಸೇರಲಾರೆ: ಸೌಗತ ರಾಯ್
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕನಿಷ್ಠ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು , ಬಿಜೆಪಿಗೆ ಬರಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಟಿಎಂಸಿ ಸಂಸದ ಸೌಗತ ರಾಯ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿ ಟಿಎಂಸಿ ಪಕ್ಷದ ಅನುಭವಿ, ಸೌಗತ ರಾಯ್ ಸೇರಿದಂತೆ ದೊಡ್ಡ ನಾಯಕರೇ ಯಾವುದೇ ಕ್ಷಣದಲ್ಲಿ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಬರಬಹುದು ಎಂದೂ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದರು . 

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸೌಗತ ರಾಯ್, ಇದೊಂದು ಬಿಜೆಪಿ ಪ್ರಚಾರದ ಕಲೆ. ಅರ್ಜುನ್ ಸಿಂಗ್ ಈ ರೀತಿ ಆರೋಪಿಸುವುದರಲ್ಲಿ ಪ್ರಸಿದ್ಧ ಬಾಹುಬಲಿ. ನಾನು ರಾಜಕೀಯ ತೊರೆದು ಸಾಯಲು ಸಿದ್ಧ ಆದರೆ, ಎಂದಿಗೂ ಬಿಜೆಪಿಗೆ ಸೇರುವುದಿಲ್ಲ ಅವರ ಜೊತೆ . ಕೈ ಜೋಡಿಸುವುದಿಲ್ಲ. ಮೇಲಾಗಿ ನಾನು ಮಾರಾಟವಾಗುವ ಸರಕು ಅಲ್ಲ ಎಂದೂ ಅವರು ಪ್ರತ್ಯುತ್ತರ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com