ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು 14 ದಿನಗಳಿಂದ ಹತ್ತು ಲಕ್ಷಕ್ಕಿಂತ ಕಡಿಮೆ

ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು 14 ದಿನಗಳಿಂದ 10 ಲಕ್ಷಕ್ಕಿಂತ ಕಡಿಮೆ ಇವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ದೇಶದಲ್ಲಿ ಕೋವಿಡ್ -19 ಸಕ್ರಿಯ ಪ್ರಕರಣಗಳು 14 ದಿನಗಳವರೆಗೆ 10 ಲಕ್ಷಕ್ಕಿಂತ ಕಡಿಮೆ ಇವೆ.

ಭಾರತದಲ್ಲಿ 9,34,427 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 903 ಸಾವುಗಳು ವರದಿಯಾಗಿವೆ. ಸೋಮವಾರದವರೆಗೆ ಸತತ ಎರಡು ವಾರಗಳಿಂದ ಸಕ್ರಿಯ ಪ್ರಕರಣಗಳು 10 ಲಕ್ಷಕ್ಕಿಂತ ಕಡಿಮೆ ಇವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 76,737 ಜನರು ಸೋಂಕಿನಿಂದ ಗುಣಮುಖರಾಗಿದ್ದರೆ, 74,442  ಹೊಸ ಪ್ರಕರಣಗಳು ವರದಿಯಾಗಿವೆ.

ಚೇತರಿಸಿಕೊಂಡ ಪ್ರಕರಣಗಳು ದೃಢಪಟ್ಟಿರುವ ಪ್ರಕರಣಗಳಿಂತ ಅಧಿಕವಾಗಿದ್ದು, ಭಾರತದಲ್ಲಿ ಸದ್ಯ, ಚೇತರಿಸಿಕೊಂಡವರ ಸಂಖ್ಯೆ 55,86,703ರಷ್ಟಿದೆ. ದೈನಂದಿನ ಚೇತರಿಕೆ ಪ್ರಮಾಣ ರಾಷ್ಟ್ರೀಯ ಚೇತರಿಕೆ ಪ್ರಮಾಣವನ್ನು ಹೆಚ್ಚಿಸಿದ್ದು, ಸದ್ಯ ಈ ಪ್ರಮಾಣ ಶೇ 84.34 ಕ್ಕೆ ತಲುಪಿದೆ. ಹೊಸದಾಗಿ ಚೇತರಿಸಿಕೊಂಡ  ಪ್ರಕರಣಗಳ ಪೈಕಿ 75 ರಷ್ಟು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಚೇತರಿಸಿಕೊಂಡ ದೈನಂದಿನ ಪ್ರಕರಣಗಳ ಸಂಖ್ಯೆ 15,000 ಕ್ಕಿಂತ ಹೆಚ್ಚಾಗಿದ್ದು, ನಂತರದ ಸ್ಥಾನದಲ್ಲಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಒಂದೇ ದಿನ ತಲಾ 7,000ಕ್ಕೂ  ಜನರು ಚೇತರಿಸಿಕೊಂಡಿದ್ದಾರೆ.

ಸೋಮವಾರದ ವೇಳೆಗೆ ಭಾರತದಲ್ಲಿ 9,34,427 ಸಕ್ರಿಯ ಪ್ರಕರಣಗಳಿವೆಯಾದರೂ, ಇವು ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ಶೇ 14.11 ರಷ್ಟಿವೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 74,442 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 12,000 ಕ್ಕೂ ಹೆಚ್ಚು, ಕರ್ನಾಟಕದಲ್ಲಿ 10,000 ಕ್ಕೂ  ಅಧಿಕ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ವರದಿಯಾದ 903 ಸಾವುಗಳ ಪೈಕಿ ಮಹಾರಾಷ್ಟ್ರದಲ್ಲಿ 326, ಕರ್ನಾಟಕದಲ್ಲಿ 67 ಸೋಂಕಿತರು ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com