ಬಿಹಾರದಲ್ಲಿ ನಿತೀಶ್ ಗೆ ಎನ್ ಡಿಎ ಬೆಂಬಲ: ಜೆಡಿಯುಗೆ 122, ಬಿಜೆಪಿಗೆ 121 ಸೀಟು ಹಂಚಿಕೆ

ಬಿಹಾರ ವಿಧಾನಸಭಾ ಚುನಾವಣೆಗಾಗಿ ಸೀಟು- ಹಂಚಿಕೆ ಸೂತ್ರವನ್ನು ಆಡಳಿತರೂಢ ಎನ್ ಡಿಎ ಮಂಗಳವಾರ ಘೋಷಿಸಿದೆ. 243 ಸ್ಥಾನಗಳ ಪೈಕಿ ಜೆಡಿಯು 122, ಬಿಜೆಪಿ 121 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗಾಗಿ ಸೀಟು- ಹಂಚಿಕೆ ಸೂತ್ರವನ್ನು ಆಡಳಿತರೂಢ ಎನ್ ಡಿಎ ಮಂಗಳವಾರ ಘೋಷಿಸಿದೆ. 243 ಸ್ಥಾನಗಳ ಪೈಕಿ ಜೆಡಿಯು 122, ಬಿಜೆಪಿ 121 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವವನ್ನು ಬಿಜೆಪಿ ಬೆಂಬಲಿಸಿದ್ದು, ಬಂಡಾಯ ಎದಿದ್ದ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವನ್ ಅವರ ನಡೆಯನ್ನು ಖಂಡಿಸಿದೆ.

ಸಮಾನ ರೀತಿಯಲ್ಲಿ ಉಭಯ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡಿರುವುದಾಗಿ ಜೆಡಿಯು ಮತ್ತು ಬಿಜೆಪಿಯ ಉನ್ನತ ಮಟ್ಟದ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆಡಿಯುನ 122 ಸ್ಥಾನಗಳ  ಪೈಕಿಯಲ್ಲಿ ಏಳು ಸ್ಥಾನಗಳಲ್ಲಿ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷಕ್ಕೆ ನೀಡಲು ನಿರ್ಧರಿಸಲಾಗಿದೆ. ಉಳಿದ 121 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು  ನಿತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಎಲ್ ಜೆಪಿ ಕೇಂದ್ರದಲ್ಲಿ ನಮ್ಮ ಮೈತ್ರಿ ಪಕ್ಷವಾಗಿದೆ. ಆದರೆ, ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಸಂಜೀವ್ ಜೈಸ್ವಾಲ್ ಹೇಳಿದರು.

ಬಿಹಾರದಲ್ಲಿ ಜೆಡಿಯು ಮೈತ್ರಿ ಪಕ್ಷಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದೆ. ಜೆಡಿಯು ಬೆಂಬಲವಿಲ್ಲದೆ ರಾಮ್ ವಿಲಾಸ್ ಪಾಸ್ವನ್ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತಿತ್ತೆ ಎಂದು ನಿತೀಶ್ ಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com