ಮುಂಬೈನಲ್ಲಿ ವಿದ್ಯುತ್ ವ್ಯತ್ಯಯ: ಜನಜೀವನ, ರೈಲು ಸೇವೆ ಅಸ್ತವ್ಯಸ್ತ; ಶೀಘ್ರದಲ್ಲೆ ಸಹಜಸ್ಥಿತಿಗೆ ಎಂದ ಸರ್ಕಾರ!

ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸರಬರಾಜು ವೈಫಲ್ಯ ಉಂಟಾಗಿದ್ದು, ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ವ್ಯತ್ಯಯ ಉಂಟಾದ ಪರಿಣಾಮ ಲೋಕಲ್ ರೈಲುಗಳ ಸಂಚಾರ ಕೂಡ ಸ್ತಬ್ಧಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸರಬರಾಜು ವೈಫಲ್ಯ ಉಂಟಾಗಿದ್ದು, ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ವ್ಯತ್ಯಯ ಉಂಟಾದ ಪರಿಣಾಮ ಲೋಕಲ್ ರೈಲುಗಳ ಸಂಚಾರ ಕೂಡ ಸ್ತಬ್ಧಗೊಂಡಿದೆ. 

ನಗರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗ್ರಿಡ್ ಫೇಲ್ ಆಗಿದ್ದರಿಂದ ಈ ಸಮಸ್ಯೆಯುಂಟಾಗಿದೆ ಎಂದು ಹೇಳಲಾಗುತ್ತಿದೆ. 

ದಕ್ಷಿಣ, ಕೇಂದ್ರ ಮತ್ತು ಉತ್ತರ ಮುಂಬೈನಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿರುವ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಬಿಎಂಸಿ (ಬೃಹನ್ ಮುಂಬೈ ಕಾರ್ಪೋರೇಷನ್) ಮತ್ತು ಬೆಸ್ಟ್ (ಬೃಹನ್ ಮುಂಬೈ ಎಲೆಕ್ಟ್ರಾನಿಕ್ ಸಪ್ಲೈ ಆ್ಯಂಡ್ ಟ್ರಾನ್ಸಪೋರ್ಟ್)ಗೆ ಟ್ಯಾಗ್ ಮಾಡುವ ಮೂಲಕ ದೂರು ಸಲ್ಲಿಸುತ್ತಿದ್ದಾರೆ. 

ಮುಂಬೈ ಹೊರವಲಯ ಥಾಣೆಯವರೆಗೂ ವಿದ್ಯುತ್ ಸಮಸ್ಯೆಯುಂಟಾಗಿರುವ ಬಗ್ಗೆ ವರದಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತ ಹಿನ್ನೆಲೆ ಪ್ರತಿಕ್ರಿಯಿಸಿರುವ ಬೆಸ್ಟ್, ಟಾಟಾ ಇನ್‍ಕಮ್ಮಿಂಗ್ ಎಲೆಕ್ಟ್ರಿಕ್ ಸರಬರಾಜಿನಲ್ಲಿ ಅಡಚಣೆಯುಂಟಾಗಿದೆ. ಈ ಹಿನ್ನೆಲೆ ನಗರದ ಬಹುತೇಕ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಸೇವೆಯಲ್ಲಿ ಉಂಟಾದ ತೊಂದರೆಗೆ ವಿಷಾದಿಸುತ್ತೇವೆ ಎಂದು ಟ್ವೀಟ್ ಮಾಡಿದೆ. 

ಆದರೆ, ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಯಾವಾಗ ಸರಿಯಾಗುತ್ತೆ ಎಂಬುದರ ಬಗ್ಗೆ ಬೆಸ್ಟ್ ಸ್ಪಷ್ಟನೆ ನೀಡಿಲ್ಲ. ಪವರ್ ಗ್ರಿಡ್ ಫೇಲ್ ಹಿನ್ನೆಲೆ ಪಶ್ಚಿಮ ಭಾಗದ ಲೋಕಲ್ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಚರ್ಚ್ ಗೇಟ್ ನಿಂದ ವಸೈವರೆಗೂ ರೈಲು ಸೇವೆ ಸ್ಥಗಿತವಾಗಿದೆ. ಇತ್ತ ವಸೈನಿಂದ ಬೋರಿವಲಿ ನಡುವೆ ರೈಲು ಸಂಚಾರವಿದೆ.

ವಿದ್ಯುತ್ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ರಾಜ್ಯ ಇಂಧನ ಸಚಿವ ನಿತಿನ್ ರಾವತ್ ಅವರು, ಮುಂದಿನ ಒಂದು ಗಂಟೆಯಲ್ಲಿ ಮುಂಬೈ ಹಾಗೂ ಥಾಣೆ ನಗರದಲ್ಲಿ ವಿದ್ಯುತ್ ಸರಬರಾಜು ಮತ್ತೆ ಆರಂಭವಾಗಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com