ದೆಹಲಿಯಲ್ಲಿ ಅ.27ಕ್ಕೆ ಭಾರತ-ಅಮೆರಿಕ ಮಧ್ಯೆ 2+2 ಮಾತುಕತೆ: ವಿದೇಶಾಂಗ, ರಕ್ಷಣಾ ಸಚಿವರು ಭಾಗಿ

ಅಮೆರಿಕ ಜೊತೆ ಭಾರತ ಇದೇ 27ರಂದು ಸಚಿವ ಮಟ್ಟದ 2+2 ಮಾತುಕತೆಯ ಮೂರನೇ ಆವೃತಿಯನ್ನು ಆಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಮೆರಿಕಾ ಕಾರ್ಯದರ್ಶಿ ಮೈಕ್ ಪೊಂಪಿಯೊ, ವಿದೇಶಾಂಗ ಸಚಿವ ಎಸ್ ಜೈಶಂಕರ್
ಅಮೆರಿಕಾ ಕಾರ್ಯದರ್ಶಿ ಮೈಕ್ ಪೊಂಪಿಯೊ, ವಿದೇಶಾಂಗ ಸಚಿವ ಎಸ್ ಜೈಶಂಕರ್

ನವದೆಹಲಿ: ಅಮೆರಿಕ ಜೊತೆ ಭಾರತ ಇದೇ 27ರಂದು ಸಚಿವ ಮಟ್ಟದ 2+2 ಮಾತುಕತೆಯ ಮೂರನೇ ಆವೃತಿಯನ್ನು ಆಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಅಮೆರಿಕ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಭಾರತಕ್ಕೆ ಮಾತುಕತೆ ನಡೆಸಲು ಅಕ್ಟೋಬರ್ 26 ಮತ್ತು 27ರಂದು ಎರಡು ದಿನಗಳ ಮಾತುಕತೆ ನಡೆಸಲಿದ್ದಾರೆ.

ಭಾರತದ ಕಡೆಯಿಂದ ಮಾತುಕತೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.

ಮೊದಲ 2+2 ಮಾತುಕತೆ ಸೆಪ್ಟೆಂಬರ್ 2018ರಂದು ದೆಹಲಿಯಲ್ಲಿ ನಡೆದಿತ್ತು. ಅಂದಿನ ಮಾತುಕತೆ ಕಾರ್ಯತಂತ್ರಕ್ಕೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ನೀಡಿದ್ದರು. ಕಳೆದ ವರ್ಷ ಡಿಸೆಂಬರ್ ನಲ್ಲಿ ಎರಡನೇ ಸುತ್ತಿನ ಮಾತುಕತೆ ವಾಷಿಂಗ್ಟನ್ ನಲ್ಲಿ ನಡೆದಿತ್ತು.

ಈ ಬಾರಿಯ ಮೂರನೇ ಆವೃತ್ತಿಯ ಮಾತುಕತೆಯಲ್ಲಿ ಇಂಡೊ-ಫೆಸಿಫಿಕ್ ಪ್ರದೇಶದ ಸ್ಥಿತಿಗತಿ, ಭಾರತದ ನೆರೆ ದೇಶಗಳೊಂದಿಗೆ ನಡೆಯುತ್ತಿರುವ ಬೆಳವಣಿಗೆ, ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com