ರಷ್ಯಾದಿಂದ ಇರಾನ್ ಗೆ ಬಂದಿಳಿದ ರಾಜನಾಥ್ ಸಿಂಗ್; ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಭದ್ರತೆ ಕುರಿತು ಚರ್ಚೆ

ಮಾಸ್ಕೋದಲ್ಲಿ ನಡೆದ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ ಸಭೆ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೇರವಾಗಿ ಇರಾನ್ ಗೆ ಬಂದಿಳಿದಿದ್ದು, ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಮೀರ್ ಹತಾಮಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಭದ್ರತೆ  ಕುರಿತು ಚರ್ಚೆ ನಡೆಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ಟೆಹ್ರಾನ್: ಮಾಸ್ಕೋದಲ್ಲಿ ನಡೆದ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ ಸಭೆ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೇರವಾಗಿ ಇರಾನ್ ಗೆ ಬಂದಿಳಿದಿದ್ದು, ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಮೀರ್ ಹತಾಮಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಭದ್ರತೆ  ಕುರಿತು ಚರ್ಚೆ ನಡೆಸಿದರು.

ರಷ್ಯಾದ ಮಾಸ್ಕೋದಲ್ಲಿ ನಡೆದ 3 ದಿನಗಳ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ ಸಭೆ ಬಳಿಕ ನೇರವಾಗಿ ಶನಿವಾರ ಟೆಹ್ರಾನ್ ಗೆ ಬಂದಿಳಿದ ರಾಜನಾಥ್ ಸಿಂಗ್ ಅವರು, ಇಲ್ಲಿ ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಮೀರ್ ಹತಾಮಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಭದ್ರತೆ  ಕುರಿತು ಚರ್ಚೆ ನಡೆಸಿದರು. ಚರ್ಚೆ ವೇಳೆ ಆಫ್ಘಾನಿಸ್ತಾನ ವಿಚಾರವಾಗಿಯೂ ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ರಾಜನಾಥ್ ಸಿಂಗ್ ಅವರು, 'ಇರಾನಿನ ರಕ್ಷಣಾ ಸಚಿವ ಬ್ರಿಗೇಡಿಯರ್ ಅವರೊಂದಿಗಿ ಚರ್ಚೆ ಫಲಪ್ರದವಾಗಿತ್ತು. ಟೆಹ್ರಾನ್‌ನಲ್ಲಿ ಜನರಲ್ ಅಮೀರ್ ಹತಾಮಿ ಮತ್ತು ನಾವು ಅಫ್ಘಾನಿಸ್ತಾನ ವಿಚಾರ ಸೇರಿದಂತೆ ಪ್ರಾದೇಶಿಕ ಭದ್ರತಾ ವಿಷಯಗಳು ಮತ್ತು ದ್ವಿಪಕ್ಷೀಯ  ಸಹಕಾರದ ಸಮಸ್ಯೆಗಳ ಕುರಿತು ಚರ್ಚಿಸಿದ್ದೇವೆ. ಅಂತೆಯೇ ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಸೇರಿದಂತೆ ಪ್ರಾದೇಶಿಕ ಭದ್ರತಾ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರ ಮತ್ತು ವಿನಿಮಯ ಅಭಿಪ್ರಾಯಗಳ ತೆಗೆದುಕೊಳ್ಳುವ ಮಾರ್ಗಗಳನ್ನು ಚರ್ಚಿಸಲಾಯಿತು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ದ್ವಿಪಕ್ಷೀಯ ಸಭೆ ಸೌಹಾರ್ಧಯುತವಾಗಿತ್ತು. ಉಭಯ ನಾಯಕರೂ ಭಾರತ ಮತ್ತು ಇರಾನ್ ನಡುವಿನ ಹಳೆಯ-ಸಾಂಸ್ಕೃತಿಕ, ಭಾಷಾ ಮತ್ತು ನಾಗರಿಕ ಸಂಬಂಧಗಳಿಗೆ ಒತ್ತು ನೀಡಿದರು ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com