ಮಾದಕ ವಸ್ತು ಜಾಲ ಪತ್ತೆ ಹಚ್ಚಿದ ಎನ್'ಸಿಬಿ ಅಧಿಕಾರಿಗಳು: ದೆಹಲಿಯಲ್ಲಿ ರೂ.48 ಕೋಟಿ ಮೌಲ್ಯದ ಹೆರಾಯಿನ್ ವಶ

ರಾಷ್ಟ್ರ ರಾಜಧಾನಿ ದೆಹಲಿಯ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಅಂತರಾಷ್ಟ್ರೀಯ ಹೆರಾಯಿನ್ ಸಾಗಾಟ ಜಾಲವೊಂದರನ್ನು ಭೇದಿಸಿದ್ದು, ಇಬ್ಬರು ವಿದೇಶಿಯರು ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಸಿ ಅವರಿಂದ ಸುಮಾರು ರೂ.48 ಕೋಟಿ ಬೆಲೆ ಬಾಳುವ ಹೆರಾಯಿನ್'ನ್ನು ವಶಪಡಿಸಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಅಂತರಾಷ್ಟ್ರೀಯ ಹೆರಾಯಿನ್ ಸಾಗಾಟ ಜಾಲವೊಂದರನ್ನು ಭೇದಿಸಿದ್ದು, ಇಬ್ಬರು ವಿದೇಶಿಯರು ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಸಿ ಅವರಿಂದ ಸುಮಾರು ರೂ.48 ಕೋಟಿ ಬೆಲೆ ಬಾಳುವ ಹೆರಾಯಿನ್'ನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತರಲ್ಲಿ ಓರ್ವ ಆಫ್ರಿಕನ್ ಪ್ರಜೆ ಮತ್ತು ಮ್ಯಾನ್ಮಾರ್ ಮೂಲಕ ಓರ್ವ ಮಹಿಳೆ ಸೇರಿದ್ದಾರೆ. ಅಂತರಾಷ್ಟ್ರೀಯ ಕೊರಿಯನ್ ಮೂಲಕ ವಿದೇಶದಿಂದ ಈ ಮಾದಕ ವಸ್ತುಗಳನ್ನು ಭಾರತಕ್ಕೆ ತರಲಾಗುತ್ತಿತ್ತು ಎಂಬ ಸುಳಿವಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು 7 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

ಆಗಸ್ಟ್ ಮೊದಲ ವಾರದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 970 ಗ್ರಾಂ ತೂಕದ ಹೆರಾಯಿನ್'ನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಜಾಲ ಬಯಲಿಗೆಳೆಯಲು ಹೆರಾಯಿನ್ ಪ್ಯಾಕೆಟ್'ನ್ನು ನಕಲಿ ಪ್ಯಾಕ್ ನೊಂದಿಗೆ ಬದಲಾಯಿಸಿ ಹಾಗೆಯೇ ಬಿಟ್ಟಿದ್ದರು. ಬಳಿಕ ಅದನ್ನು ಪಡೆದುಕೊಳ್ಳುವವರ ಮೇಲೆ ನಿಗಾ ಇರಿಸಿದ್ದ ಅಧಿಕಾರಿಗಳು ಜಾಲವನ್ನು ಬಯಲಿಗೆಳೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com