ಅಮಿತ್ ಶಾ-ಪ್ರಧಾನಿ ಮೋದಿ
ಅಮಿತ್ ಶಾ-ಪ್ರಧಾನಿ ಮೋದಿ

ದೇಶ ಸೇವೆ, ಬಡವರ ಉದ್ಧಾರಕ್ಕಾಗಿ ನರೇಂದ್ರ ಮೋದಿ ಜೀವನ ಮೀಸಲು: ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಸೇವೆ, ಬಡವರ ಕಲ್ಯಾಣಕ್ಕಾಗಿಯೇ ತಮ್ಮ ಇಡಿ ಜೀವನ ಮೀಸಲಿಟ್ಟಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಸೇವೆ, ಬಡವರ ಕಲ್ಯಾಣಕ್ಕಾಗಿಯೇ ತಮ್ಮ ಇಡಿ ಜೀವನ ಮೀಸಲಿಟ್ಟಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  ಹೇಳಿದ್ದಾರೆ.

ಪಿಎಂ ಮೋದಿ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಶುಭ ಕೋರಿದ ಸಚಿವರು, ಮೋದಿಯವರ ನಾಯಕತ್ವದಲ್ಲಿ ಸಮಾಜದ ಬಡ ಮತ್ತು ವಂಚಿತರಿಗೆ  ದುರ್ಬಲರಿಗೆ ಗೌರವ  ಜೀವನ ಕಲ್ಪಿಸಲಾಗಿದೆ ಎಂದರು.

ರಾಷ್ಟ್ರದ ಸೇವೆ ಮತ್ತು ಬಡವರ ಕಲ್ಯಾಣಕ್ಕೆ ಮೀಸಲಾಗಿರುವ ದೇಶದ ಅತ್ಯಂತ ಜನಪ್ರಿಯ ನಾಯಕ- ಪ್ರಧಾನಿಗೆ ನನ್ನ  ಜನ್ಮದಿನದ ಶುಭಾಶಯಗಳು ಎಂದು ಅಮಿತ್ ಶಾ ಹಿಂದಿಯಲ್ಲಿ  ಟ್ವೀಟ್ ಮಾಡಿದ್ದಾರೆ.

ಇನ್ನು 70ರ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸರ್ಕಾರದ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com