ಲಾಕ್ ಡೌನ್ ಎಫೆಕ್ಟ್: ಕಂಕುಳಲ್ಲಿ 18 ತಿಂಗಳ ಮಗು ಎತ್ತಿಕೊಂಡು 8 ದಿನ, 100 ಕಿ.ಮೀ ದೂರ ನಡೆದ ಮಹಿಳೆ!

ಕೋವಿಡ್ -19 ಪರಿಣಾಮದಿಂದಾಗಿ ಅಸ್ಸಾಂನ 25 ವರ್ಷದ ಮಹಿಳೆಯೊಬ್ಬರು 18 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು 100 ಕಿಲೋ ಮೀಟರ್ ದೂರ ನಡೆದಿರುವ ಘಟನೆ ನಡೆದಿದೆ.
ಬಂದ್ ಆದ ಗ್ರಾಮ, ಮಹಿಳೆ
ಬಂದ್ ಆದ ಗ್ರಾಮ, ಮಹಿಳೆ

ಗುವಾಹಟಿ: ಕೋವಿಡ್ -19 ಪರಿಣಾಮದಿಂದಾಗಿ ಅಸ್ಸಾಂನ 25 ವರ್ಷದ ಮಹಿಳೆಯೊಬ್ಬರು 18 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು 100 ಕಿಲೋ ಮೀಟರ್ ದೂರ ನಡೆದಿರುವ ಘಟನೆ ನಡೆದಿದೆ.

ಮಾರ್ಚ್ 24 ರಂದು  ಈ ಘಟನೆ ನಡೆದಿದೆ. ವಿಧವೆ ಮಹಿಳೆ ಅಂಜನಾ ಗೊಗೋಯ್ ಗೋಲಾಘಾಟ್ ಜಿಲ್ಲೆಯ 
ಸರುಪಾಥರ್ ಗ್ರಾಮದ ತನ್ನ ಅತ್ತೆಯ ಮನೆಯಿಂದ 130 ಕಿಲೋಮೀಟರ್ ದೂರ ಇರುವ ಜೋರ್ಹತ್  ಜಿಲ್ಲೆಯ ಲಾಹಿಂಗ್ ನಲ್ಲಿರುವ ತನ್ನ ಪೋಷಕರ ಮನೆಗೆ ನಡಿಗೆಯ ಮೂಲಕ ಸಾಗಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ 8 ದಿನಗಳಲ್ಲಿ 100 ಕಿಲೋಮೀಟರ್ ದೂರು ನಡೆದಿರುವ ಈ ಮಹಿಳೆಯನ್ನು ಮಾರಿಯಾನಿ ಬಳಿ ರಕ್ಷಿಸಿರುವ ಪೊಲೀಸರು ಊಟ ನೀಡಿದ್ದಾರೆ. ನಂತರ ಅವರ ಮನೆಗೆ ಡ್ರಾಪ್ ಮಾಡಿದ್ದಾರೆ.

ಬುಧವಾರ ಈ ಮಹಿಳೆ ಬಗ್ಗೆ ಕೆಲವರು ಮಾಹಿತಿ ನೀಡಿದ ನಂತರ ತಂಡವೊಂದನ್ನು ಕಳುಹಿಸಿ ರಕ್ಷಿಸಲಾಯಿತು. ನಂತರ ಅವರ ಆರೋಗ್ಯ ತಪಾಸಣೆ ನಡೆಸಿ ಆಹಾರ ನೀಡಿ, ಮನೆಗೆ ವಾಹನದಲ್ಲಿ ಕಳುಹಿಸಿಕೊಡಲಾಯಿತು ಎಂದು ಮಾರಿಯಾನಿ ಠಾಣೆ ಇನ್ಸ್ ಪೆಕ್ಟರ್ ತಿಲಕ್ ಬೊರಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದರು.

ಒಂದೂವರೆ ವರ್ಷದ ಹಿಂದೆ ತಮ್ಮ ಪತಿ ತೀರಿಹೋಗಿದ್ದು, ಅತ್ತೆ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳದ ಕಾರಣ ತಂದೆ ತಾಯಿಗಳ ಮನೆಗೆ ಹೋಗುತ್ತಿದ್ದಾಗಿ ಆ ಮಹಿಳೆ ಹೇಳಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com