ಕೊರೋನಾ ವೈರಸ್: 15 ದಿನದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ, 14 ರೋಗಿಗಳ ಪೈಕಿ 9 ಮಂದಿ ಗುಣಮುಖ; ಲಡಾಖ್ ಕ್ರಮಕ್ಕೆ ನ್ಯಾಯಾಲಯ ಶ್ಲಾಘನೆ

ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶದಲ್ಲಿ ವೈರಸ್ ನಿಂದಾಗಿ 80 ಮಂದಿ ಸಾವನ್ನಪ್ಪಿದ್ದು, 3374 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಆದರೆ ಇದೇ ನಮ್ಮ ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಕ್ ನಲ್ಲಿ ಮಾತ್ರ ಕಳೆದ 15 ದಿನಗಳಿಂದ  ಕೇವಲ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.
ಲಡಾಖ್ ನಲ್ಲಿ ಲಾಕ್ ಡೌನ್
ಲಡಾಖ್ ನಲ್ಲಿ ಲಾಕ್ ಡೌನ್

ಲಡಾಖ್: ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶದಲ್ಲಿ ವೈರಸ್ ನಿಂದಾಗಿ 80 ಮಂದಿ ಸಾವನ್ನಪ್ಪಿದ್ದು, 3374 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಆದರೆ ಇದೇ ನಮ್ಮ ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಕ್ ನಲ್ಲಿ ಮಾತ್ರ ಕಳೆದ 15 ದಿನಗಳಿಂದ  ಕೇವಲ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ.

ಹೌದು.. ವಿಶ್ವದಾದ್ಯಂತ ಹಬ್ಬುತ್ತಿರುವ ಮಾರಣಾಂತಿಕ ಕೊರೊನಾಗೆ ಕಡಿವಾಣ ಹಾಕುವಲ್ಲಿ ಲಡಾಕ್‌ ಕೇಂದ್ರಾಡಳಿತ ಪ್ರದೇಶ ಯಶಸ್ವಿಯಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿ ಒಂದಾದ ಲಡಾಕ್‌ನಲ್ಲಿ ಕಳೆದ 15 ದಿನಗಳಲ್ಲಿ ಕೇವಲ  ಒಂದು ಪ್ರಕರಣ ಕಂಡು ಬಂದಿದೆ. ಮಾರ್ಚ್‌ 7ರಂದು ಇರಾನ್‌ನಿಂದ ಬಂದಿದ್ದ ಇಲ್ಲಿನ ಇಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಮಾರ್ಚ್‌ 18ರ ಹೊತ್ತಿಗೆ ಸೋಂಕಿತರ ಸಂಖ್ಯೆ 13 ತಲುಪಿತ್ತು. ಅವರಲ್ಲಿ ಏಳು ಮಂದಿ ಗುಣಮುಖರಾಗಿದ್ದಾರೆ. ಆದರೆ ಇದೀಗ ಲಡಾಖ್ ನಲ್ಲಿ ಕೊರೋನಾ  ವೈರಸ್ ಸಂಪೂರ್ಣ ನಿಯಂತ್ರಣದಲ್ಲಿದ್ದು, ಕಳೆದ 15 ದಿನದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಮಾತ್ರ ದಾಖಲಾಗಿದೆ. 

ಕಡಿವಾಣ ಹಾಕಿದ್ದು ಹೇಗೆ?
ಈ ಬಗ್ಗೆ ಲಡಾಖ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಶಂಕಿತರನ್ನು ಕಣ್ಗಾವಲಿನಲ್ಲಿ ಇಟ್ಟು, ಪ್ರಾರಂಭಿಕ ಹಂತದಲ್ಲೇ ಪ್ರಕರಣಗಳನ್ನು ಗುರ್ತಿಸಿ ಅವರನ್ನು ಬೇರ್ಪಡಿಸಿ ಚಿಕಿತ್ಸೆ ನೀಡಿದ ಪರಿಣಾಮ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ತಕ್ಷಣ ಗುರ್ತಿಸಿ ಸೋಂಕು ಹರಡದಂತೆ  ಕ್ರಮ ಕೈಗೊಂಡಿದ್ದರಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ ಎಂದು ಹೇಳಿದ್ದಾರೆ. ಅಲ್ಲದೆ ಕಟ್ಟುನಿಟ್ಟಿನ ಸಂಪೂರ್ಣ ಲಾಕ್‌ಡೌನ್‌ ಜಾರಿ, ಸಂಪರ್ಕ ಪತ್ತೆ, ಸ್ವಯಂ ಪ್ರೇರಣೆಯಿಂದ ಜನರು ಘೋಷಣೆ ಹಾಗೂ ಪರೀಕ್ಷೆಗೆ ಮುಂದಾದ ಪರಿಣಾಮ ಕೋವಿಡ್‌ –19 ನಿಯಂತ್ರಣಕ್ಕೆ  ತರಲು ಸಾಧ್ಯವಾಯಿತು.

ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಕ್ಷಣ ಸ್ಪಂದಿಸಿದ ಲಡಾಕ್‌ನ ಜನರ ನಿಲುವು ಹಾಗೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಶ್ರಮವನ್ನು ಚಂಡಿಗಡದ ಸ್ನಾತಕೋತ್ತರ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಯ  ವೈದ್ಯರ ನೇತೃತ್ವದ ‘ಕೇಂದ್ರ ಕ್ಷಿಪ್ರ ಕಾರ್ಯಪಡೆ’ಯು ಪ್ರಶಂಸೆ ವ್ಯಕ್ತಪಡಿಸಿದೆ. ಕೇಂದ್ರಾಡಳಿತ ಪ್ರದೇಶದ ಪೂರ್ವಭಾವಿ ಕ್ರಮ ಹಾಗೂ ಕಟ್ಟುನಿಟ್ಟಿನ ನಿಯಮ ಪರಿಸ್ಥಿತಿಯನ್ನು ಹತೋಟಿಗೆ ತರಲು ಕಾರಣವಾಗಿದೆ. ಕಾಶ್ಮೀರ ಕಣಿವೆ ಹಾಗೂ ದೇಶದ ಇತರೆ ಪ್ರದೇಶಗಳ ಜನರು ಲಡಾಕ್‌ನ  ಜನರಷ್ಟು ಶೀಘ್ರಗತಿಯಲ್ಲಿ ಕೋವಿಡ್‌ ತಡೆಗೆ ಸಹಕರಿಸಲಿಲ್ಲ. ಹಾಗಾಗಿ ಎಲ್ಲೆಡೆ ಪ್ರಕರಣ ಉಲ್ಬಣವಾಗಲು ಕಾರಣವಾಯಿತು. ನಾವು ಲಡಾಕ್‌ ಅನ್ನು ಮಾದರಿಯಾಗಿ ಪರಿಗಣಿಸಿ ಮಾರಣಾಂತಿಕ ಕೋವಿಡ್‌ ತಡೆಗೆ ಮುಂದಾಗಬೇಕು’ ಎಂದು ಶ್ರೀನಗರ ಹಿರಿಯ ವೈದ್ಯರೊಬ್ಬರು ಹೇಳಿದರು.

ಲಡಾಖ್ ಕಾರ್ಯಕ್ಕೆ ಹೈಕೋರ್ಟ್ ಶ್ಲಾಘನೆ
ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಡಾಖ್ ಆಡಳಿತ ಕೈಗೊಂಡ ಕಾರ್ಯಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು. ಇದೇ ಕಾರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಲಡಾಖ್ ಆಡಳಿತವನ್ನು ಶ್ಲಾಘಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕುರಿತು  ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ರಜನೇಶ್ ಓಸ್ವಾಲ್ ಅವರು, 'ಲಡಾಖ್ ನಲ್ಲಿ ಇಲ್ಲಿನ ಆಡಳಿತ ಕೈಗೊಂಡ ಕ್ರಮಗಳು ನಿಜಕ್ಕೂ ದೇಶಕ್ಕೆ ಮಾದರಿಯಾಗಿದೆ.

ಇಲ್ಲಿನ ಜಿಲ್ಲಾಡಳಿತಗಳು, ಪೊಲೀಸ್ ಇಲಾಖೆ, ಕಾನೂನು ಸೇವೆಗಳ  ಅಧಿಕಾರಿಗಳು, ಜನತೆಗೆ ನಿರಂತರವಾಗಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಜನತೆ ಅಗತ್ಯ ವಸ್ತುಗಳಿಗಾಗಿ ಪರದಾಡುವುದನ್ನು ತಪ್ಪಿಸಿದ್ದಾರೆ. ರಾಜ್ಯಾದ್ಯಂತ ಜನರ ಅನಗತ್ಯ ಓಡಾಟಕ್ಕೆ ಪರಿಣಾಮಕಾರಿ ಕಡಿವಾಣ ಹಾಕಿದೆ. ಕಟ್ಟುನಿಟ್ಟಾದ  ಲಾಕ್‌ಡೌನ್‌ ಹಾಗೂ ಸಮುದಾಯ ಸಂಪರ್ಕ ಪತ್ತೆ ಹಚ್ಚುವಿಕೆಯು ಸೋಂಕಿತರ ಪ್ರಕರಣ ಇಳಿಮುಖವಾಗಲು ಪ್ರಮುಖ ಕಾರಣ ಆ ಮೂಲಕ ಲಡಾಖ್ ದೇಶದ ಎಲ್ಲ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com