ಕೊರೋನಾ ವೈರಸ್: ಟ್ರಂಪ್ ಜೊತೆ ಮೋದಿ ಮಹತ್ವದ ಮಾತು: ಜಂಟಿ ಯುದ್ಧಕ್ಕೆ ವಿಶ್ವ ನಾಯಕರ ಪಣ! 

ಕೋವಿಡ್-19 ಮಹಾಮಾರಿಗೆ ಇಡೀ ವಿಶ್ವವೇ ತತ್ತರಿಸಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕ ಸಹ ನಲುಗಿದೆ. 
ಟ್ರಂಪ್-ಮೋದಿ
ಟ್ರಂಪ್-ಮೋದಿ

ನವದೆಹಲಿ: ಕೋವಿಡ್-19 ಮಹಾಮಾರಿಗೆ ಇಡೀ ವಿಶ್ವವೇ ತತ್ತರಿಸಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕ ಸಹ ನಲುಗಿದೆ. 

ಸಾವಿರ ಸಾವಿರ ಸಂಖ್ಯೆಯಲ್ಲಿ ಸಾವುಗಳು ಸಂಭವಿಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಅಮೆರಿಕ-ಭಾರತದ ಪಾಲುದಾರಿಕೆಯ ಸಂಪೂರ್ಣ ಶಕ್ತಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಎಂದು ಟ್ವೀಟ್ ಮಾಡಿದ್ದಾರೆ. 

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,000 ದಾಟಿದರೆ ಅಮೆರಿಕಾದಲ್ಲಿ ಈ ವರೆಗೂ 2,77,000 ಮಂದಿಗೆ ಸೋಂಕು ತಗುಲಿದ್ದು 74,00 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕಾದಲ್ಲಿ ಕೋವಿಡ್-19 ನ ಕೇಂದ್ರವಾಗಿರುವ ನ್ಯೂಯಾರ್ಕ್ ನಲ್ಲಿ ಕೊರೋನಾ ಎದುರಿಸಲು ಅಗತ್ಯವಿರುವ ಪಿಪಿಇ ಗಳು, ಮಾಸ್ಕ್, ಸೇರಿದಂತೆ ಅನೇಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಒದ್ದಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಬೇರೆ ರಾಷ್ಟ್ರಗಳಿಂದ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com