ಕೊರೋನಾ ವೈರಸ್: 1 ದಿನದಲ್ಲಿ 505 ಹೊಸ ಪ್ರಕರಣಗಳು ಪತ್ತೆ: ಸಾವಿನ ಸಂಖ್ಯೆ 83 ಕ್ಕೆ ಏರಿಕೆ

ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ನ ಹೊಸ 505 ಪ್ರಕರಣಗಳು ವರದಿಯಾಗಿದ್ದು ಸಾವಿನ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ. 
ಕೊರೋನಾ ವೈರಸ್: 1 ದಿನದಲ್ಲಿ 505 ಹೊಸ ಪ್ರಕರಣಗಳು ಪತ್ತೆ: ಸಾವಿನ ಸಂಖ್ಯೆ 83 ಕ್ಕೆ ಏರಿಕೆ
ಕೊರೋನಾ ವೈರಸ್: 1 ದಿನದಲ್ಲಿ 505 ಹೊಸ ಪ್ರಕರಣಗಳು ಪತ್ತೆ: ಸಾವಿನ ಸಂಖ್ಯೆ 83 ಕ್ಕೆ ಏರಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ನ ಹೊಸ 505 ಪ್ರಕರಣಗಳು ವರದಿಯಾಗಿದ್ದು ಸಾವಿನ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ. 

ಈ ವರೆಗೂ ಭಾರತದಲ್ಲಿ ಸೋಂಕಿತರ ಸಂಖ್ಯೆ 3,577 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 274 ಜನರು ಈ ವರೆಗೂ ಕೊರೋನಾ ವೈರಸ್ ನಿಂದ ಗುಣಮುಖರಾಗಿದ್ದು, ಓರ್ವ ವ್ಯಕ್ತಿ ಸ್ಥಳಾಂತರಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ. 

ರಾಜ್ಯಗಳಿಂದ ವರದಿಯಾಗಿರುವ ಸಾವಿನ ಪ್ರಕರಣಗಳು ದೇಶಾದ್ಯಂತ ಒಟ್ಟಾರೆ 126 ಕ್ಕೆ ಹಾಗೂ ಸೋಂಕಿತರ ಸಂಖ್ಯೆ 4,111 ಕ್ಕೆ ಏರಿಕೆಯಾಗಿರುವುದನ್ನು ತೋರಿಸುತ್ತಿದೆ. ಆದರೆ ಸಚಿವಾಲಯ 83 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. 

ರಾಜ್ಯಗಳಿಂದ ಬಿಡುಗಡೆಯಾಗಿರುವ ಅಂಕಿ-ಅಂಶಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಗೂ ಬಹಳ ವ್ಯತ್ಯಾಸ ಕಂಡುಬರುತ್ತಿದ್ದು, ಅಧಿಕಾರಿಗಳ ಪ್ರಕಾರ ಕಾರ್ಯವಿಧಾನದ ವಿಳಂಬ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 503 ಪ್ರಕರಣಗಳು ವರದಿಯಾಗಿವೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com