ಕ್ಯಾನ್ಸರ್ ವಿರುದ್ಧ ಸೋತ 'ಶೌರ್ಯ ಚಕ್ರ' ವಿಜೇತ ನವಜೋತ್ ಸಿಂಗ್, ಅಂತಿಮ ದರ್ಶನಕ್ಕೆ 2000 ಕಿ.ಮೀ ಪ್ರಯಾಣಿಸಿದ ಪೋಷಕರು!

ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ಜೊತೆ ಹೋರಾಟ ನಡೆಸುತ್ತ ಬಂದಿದ್ದ ಭಾರತೀಯ ಸೇನೆಯ ಕಮಾಂಡರ್ ಶೌರ್ಯ ಚಕ್ರ ವಿಜೇತ ನವಜೋತ್ ಸಿಂಗ್ ನಿಧನರಾಗಿದ್ದಾರೆ.
ನವಜೋತ್ ಸಿಂಗ್ ಬಾಲ್
ನವಜೋತ್ ಸಿಂಗ್ ಬಾಲ್

ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ಜೊತೆ ಹೋರಾಟ ನಡೆಸುತ್ತ ಬಂದಿದ್ದ ಭಾರತೀಯ ಸೇನೆಯ ಕಮಾಂಡರ್ ಶೌರ್ಯ ಚಕ್ರ ವಿಜೇತ ನವಜೋತ್ ಸಿಂಗ್ ನಿಧನರಾಗಿದ್ದಾರೆ.

ಕೊರೋನಾ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಬಾಲ್ ಪೋಷಕರಿಗೆ ಭಾರತೀಯ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ಸಿಗದ ಕಾರಣ ಅವರು ಗುರುಗ್ರಾಮ್ ನಿಂದ ಬೆಂಗಳೂರಿಗೆ ರಸ್ತೆ ಮೂಲಕ 2000 ಕಿ.ಮೀ ಪ್ರಯಾಣಿಸಲಿದ್ದಾರೆ.

ಕರ್ನಲ್ ನವಜೋತ್ ಅವರ ತಂದೆ 83 ವರ್ಷದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕೆ.ಎಸ್. ಬಾಲ್, ತಾಯಿ ಮತ್ತು ಸಹೋದರರು ವಾಯುಸೇನೆಯಿಂದ ಯಾವುದೇ ಭರವಸೆ ಸಿಗದ ಕಾರಣ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

39ರ ಹರೆಯದ ಬಾಲ್ 2016 ರಲ್ಲಿ ಕಾಶ್ಮೀರದ ಲೋಲಾಬ್ ಕಣಿವೆಯ ಮೇಲಿನ ಶ್ರೇಣಿಗಳಲ್ಲಿನ ಕಾರ್ಯಾಚರಣೆಗಾಗಿ ಶೌರ್ಯ ಚಕ್ರವನ್ನು ನೀಡಲಾಯಿತು. ಅಲ್ಲಿ ಅವರು ಭಯೋತ್ಪಾದಕರನ್ನು ಹಿಮ್ಮಟ್ಟಿಸಿ ಜೊತೆಗೆ ಇಬ್ಬರು ಉಗ್ರರನ್ನ ಹತ್ಯೆ ಮಾಡಿದ್ದರು . ತೋಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೇನೆಯ ಹೀರೋ ಬಾಲ್ ಕೊನೆಯದಾಗಿ ಸಾವಿನ 24 ಗಂಟೆ ಮೊದಲು ತೆಗೆದ ಸೆಲ್ಫಿ ಅವರ ಹೋರಾಟದ ಬದುಕಿಗೆ ಸಾಕ್ಷಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com