ಲಾಕ್ ಡೌನ್ ಎಫೆಕ್ಟ್: ಮೊಬೈಲ್ ಗೇಮ್ ನಲ್ಲಿ ಸೋತಿದ್ದಕ್ಕೆ ಪತ್ನಿಯ ಬೆನ್ನು ಮೂಳೆ ಮುರಿದ ಭೂಪ!

ಕೊರೋನಾ ವೈರಸ್ ಲಾಕ್ ಡೌನ್ ಪರಿಣಾಮ ಮೊಬೈಲ್ ಗೇಮ್ ನಲ್ಲಿ ಸೋತ ಪತಿಯೋರ್ವ ಆಕ್ರೋಶಗೊಂಡು ತನ್ನ ಪತ್ನಿಯ ಬೆನ್ನು ಮೂಳೆಯನ್ನೇ ಮುರಿದು ಹಾಕಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್: ಕೊರೋನಾ ವೈರಸ್ ಲಾಕ್ ಡೌನ್ ಪರಿಣಾಮ ಮೊಬೈಲ್ ಗೇಮ್ ನಲ್ಲಿ ಸೋತ ಪತಿಯೋರ್ವ ಆಕ್ರೋಶಗೊಂಡು ತನ್ನ ಪತ್ನಿಯ ಬೆನ್ನು ಮೂಳೆಯನ್ನೇ ಮುರಿದು ಹಾಕಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಒಂದೆಡೆ ಮಾರಕ ಕೊರೋನಾ ವೈರಸ್ ನಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ಕೆಲಸ ವಿಲ್ಲದೆ ಗಂಡಂದಿರು ಅನಿವಾರ್ಯವಾಗಿ ಮನೆಯಲ್ಲಿಯೇ ಕುಳಿತುಕೊಳ್ಳಬೇಕಿದೆ. ಲಾಕ್ ಡೌನ್ ಹೇರಿರುವ ಕಾರಣ ಟೈಮ್ ಪಾಸ್ ಗಾಗಿ ಎಲ್ಲೂ ಹೊರಗಡೆ ಹೋಗುವಂತಿಲ್ಲ. ಹೀಗಾಗಿ ಎಲ್ಲರೂ  ಮೊಬೈಲ್ ಗೇಮ್ ಗಳ ಮೊರೆ ಹೋಗುತ್ತಿದ್ದು, ಇದೀಗ ಇದೇ ಮೊಬೈಲ್ ಗೇಮ್ ನಿಂದಾಗಿ ಪತಿಯೊಬ್ಬ ತನ್ನ ಪತ್ನಿಯ ಬೆನ್ನು ಮೂಳೆ ಮುರಿದು ಹಾಕಿದ್ದಾನೆ.

ಗುಜರಾತ್ ನ ವಡೋದರದ ವೆಮಾಲಿಯಲ್ಲಿ ಮಹಿಳೆಯೊಬ್ಬಳು ಗಂಡ ಹೊರಗೆ ಹೋಗದಿರಲೆಂದು ಆತನಿಗೆ ಮೊಬೈಲ್ ​ನಲ್ಲಿ ಲೂಡೋ ಗೇಮ್ ಆಡುವುದನ್ನು ಕಲಿಸಿದಳು. ಆ ಮೇಲೆ ಅವರಿಬ್ಬರೂ ಟೈಂಪಾಸ್​ಗೆಂದು ಆನ್​ಲೈನ್​ನಲ್ಲಿ ಲೂಡೋ ಆಡುತ್ತಿದ್ದರು. ಲೂಡೋದಲ್ಲಿ ಸದಾ  ಹೆಂಡತಿಯೇ ಮೊದಲು ಗೆಲ್ಲುತ್ತಿದ್ದಳು. ಅಲ್ಲದೆ, ಗಂಡನನ್ನು ಸೋಲಿಸಿ ಮುಂದೆ ಹೋಗುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಗಂಡ ಆಕೆಯೊಂದಿಗೆ ಜಗಳವಾಡುತ್ತಿದ್ದ. ಕೆಲವೊಮ್ಮೆ ಇದೇ ವಿಷಯಕ್ಕೆ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಇದರಿಂದ ಕೋಪಗೊಂಡಿದ್ದ ಗಂಡ ಆಕೆಯೊಂದಿಗೆ  ಜಗಳವಾಡುತ್ತಿದ್ದ. ಕೆಲವೊಮ್ಮೆ ಇದೇ ವಿಷಯಕ್ಕೆ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಪದೇಪದೇ ಹೆಂಡತಿಯಿಂದ ಲೂಡೋದಲ್ಲಿ ಸೋಲನ್ನು ಅನುಭವಿಸುತ್ತಿದ್ದುದರಿಂದ ಕೋಪಗೊಂಡ ಗಂಡ ಆಕೆಗೆ ಜೋರಾಗಿ ಥಳಿಸಿದ್ದಾನೆ.

ಪದೇಪದೆ ಹೆಂಡತಿಯಿಂದ ಲೂಡೋದಲ್ಲಿ ಸೋಲನ್ನು ಅನುಭವಿಸುತ್ತಿದ್ದುದರಿಂದ ಕೋಪಗೊಂಡ ಗಂಡ ಆಕೆಗೆ ಜೋರಾಗಿ ಥಳಿಸಿದ್ದಾನೆ. ಈ ವೇಳೆ ಹೆಂಡತಿಯ ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಮಹಿಳೆ ನೋವಿನಿಂದ ನರಳುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಬೆನ್ನು ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ. ಕೂಡಲೇ ಮಹಿಳೆ ಗುಜರಾತ್ ಸರ್ಕಾರದ ಅಭಯಮ್ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಅಭ್ಯಮ್ ಅಧಿಕಾರಿ ಚಂದ್ರಕಾಂತ್ ಮಕ್ವಾನಾ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ  ನಡೆಸಿದ್ದಾರೆ. ಪ್ರಸ್ತುತ ಮಹಿಳೆ ಗಂಡನ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದು, ತನ್ನ ತಾಯಿ ಮನೆಗೆ ಹೋಗಲು ನಿರ್ಧರಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com