ಕೊರೋನಾ ವೈರಸ್: ಕರ್ನಾಟಕವನ್ನೂ ಮೀರಿಸಿದ ಆಂಧ್ರ ಪ್ರದೇಶ, ಒಂದೇ ದಿನ 9,276 ಹೊಸ ಸೋಂಕು ಪ್ರಕರಣ ಪತ್ತೆ

ಮಾರಕ ಕೊರೋನಾ ವೈರಸ್ ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿದ್ದು, ಕರ್ನಾಟಕದಂತೆಯೇ ಆಂಧ್ರ ಪ್ರದೇಶದಲ್ಲೂ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ ಆಂಧ್ರ ಪ್ರದೇಶದಲ್ಲಿ 9,276 ಹೊಸ ಪ್ರಕರಣಗಳು ದಾಖಲಾಗಿದೆ.
ಆಂಧ್ರ ಪ್ರದೇಶದಲ್ಲಿ ಕೊರೋನಾ ಆರ್ಭಟ
ಆಂಧ್ರ ಪ್ರದೇಶದಲ್ಲಿ ಕೊರೋನಾ ಆರ್ಭಟ

ಅಮರಾವತಿ: ಮಾರಕ ಕೊರೋನಾ ವೈರಸ್ ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿದ್ದು, ಕರ್ನಾಟಕದಂತೆಯೇ ಆಂಧ್ರ ಪ್ರದೇಶದಲ್ಲೂ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ ಆಂಧ್ರ ಪ್ರದೇಶದಲ್ಲಿ 9,276 ಹೊಸ ಪ್ರಕರಣಗಳು ದಾಖಲಾಗಿದೆ.

ಹೌದು.. ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಾದ್ಯಂತ 9,276 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ1,50,209ಕ್ಕೆ ಏರಿಕೆಯಾಗಿದೆ. ಈ ಪೈಕಿ 76,614 ಸೋಂಕಿತರು ಗುಣಮುಖರಾಗಿದ್ದು, 72,188 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತೆಯೇ ಈ ವರೆಗೂ ಆಂಧ್ರ ಪ್ರದೇಶದಲ್ಲಿ 1,407 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಪಶ್ಚಿಮ ಗೋದಾವರಿಯಲ್ಲಿ ಅತೀ ಹೆಚ್ಚು ಅಂದರೆ 21271 ಮಂದಿ ಸೋಂಕಿತರಿದ್ದಾರೆ. ಅನಂತಪುರದಲ್ಲಿ 15827 ಮಂದಿ ಸೋಂಕಿತರಿದ್ದು, ಕರ್ನೂಲಿನಲ್ಲಿ 18081 ಮಂದಿ ಸೋಂಕಿತರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com