'ಆತ್ಮನಿರ್ಭರ್ ಭಾರತ ಸಾಪ್ತಾಹ'ಕ್ಕೆ ಇಂದು ರಾಜನಾಥ್ ಸಿಂಗ್ ಚಾಲನೆ

ಆತ್ಮನಿರ್ಭರ್ ಭಾರತ್ ಸಾಪ್ತಾಹಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಚಾಲನೆ ನೀಡಲಿದ್ದಾರೆ ಎಂಬುದುಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಅಪರಾಹ್ನ 3-30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯದಕಚೇರಿ ಟ್ವೀಟ್ ಮಾಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಆತ್ಮನಿರ್ಭರ್ ಭಾರತ್ ಸಾಪ್ತಾಹಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಚಾಲನೆ ನೀಡಲಿದ್ದಾರೆ ಎಂಬುದು
ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಅಪರಾಹ್ನ 3-30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯದ
ಕಚೇರಿ ಟ್ವೀಟ್ ಮಾಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆತ್ಮನಿರ್ಭರ್ ಭಾರತ್ ನಿರ್ಮಿಸಲಾಗುತ್ತಿದ್ದು, ಆಹಾರ, ಬಟ್ಟೆ, ವಸತಿಯಂತೆ ಶಿಕ್ಷಣ ಮತ್ತು ಆರೋಗ್ಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ ಎಂದು ಆನ್ ಲೈನ್ ಕಾರ್ಯಕ್ರಮವೊಂದರಲ್ಲಿ ರಾಜನಾಥ್ ಸಿಂಗ್ ಹೇಳಿದ್ದರು.

ಚಂಪಾರಣ್ಯ ಸತ್ಯಾಗ್ರಹದ 100ನೇ ವರ್ಷಾಚರಣೆ ಸಂದರ್ಭದಲ್ಲಿ 2017ರಲ್ಲಿ ನವ ಭಾರತ ನಿರ್ಮಾಣ ಘೋಷಣೆ ಮಾಡಿದ್ದ
ಪ್ರಧಾನಿ ನರೇಂದ್ರ ಮೋದಿ, ಅದನ್ನು ಈಗ ಸ್ಪಷ್ಟಪಡಿಸಿದ್ದಾರೆ. ಅದು ಸ್ವಾವಲಂಭಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತದೆ
ಎಂದು ಸಿಂಗ್ ತಿಳಿಸಿದ್ದಾರೆ.

ದೇಶಿಯ ರಕ್ಷಣಾ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಲಘು ಯುದ್ದ ಹೆಲಿಕಾಪ್ಟರ್ ಗಳು, ಸಾಗಾಣಿಕಾ ವಿಮಾನಗಳು
ಸೇರಿದಂತೆ 101 ಯುದ್ದೋಪಕರಣಗಳ ಆಮದನ್ನು  ನಿರ್ಬಂಧಿಸಲಾಗಿದೆ ಎಂದು ರಾಜನಾಥ್ ಸಿಂಗ್ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com