ಹೈದರಾಬಾದ್ ಬಳಿ ಭೀಕರ ಅಪಘಾತ, ನಾಲ್ವರು ಮಹಿಳೆಯರು, ಮಗು ಸೇರಿ ಆರು ಮಂದಿ ಸಾವು
ಇನ್ನೋವಾ ಕಾರೊಂದು ಬುಧವಾರ ಬೋರ್‌ವೆಲ್ ಕೊರೆಯುವ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ ಸಮೀಪದ ಚೆವೆಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Published: 02nd December 2020 04:17 PM | Last Updated: 02nd December 2020 04:17 PM | A+A A-

ಸಾಂದರ್ಭಿಕ ಚಿತ್ರ
ಹೈದರಾಬಾದ್: ಇನ್ನೋವಾ ಕಾರೊಂದು ಬುಧವಾರ ಬೋರ್‌ವೆಲ್ ಕೊರೆಯುವ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ ಸಮೀಪದ ಚೆವೆಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು 46 ವರ್ಷದ ಮೊಹಮ್ಮದ್ ಆಸಿಫ್ ಖಾನ್, ಬಹದ್ದೂರ್ಪುರದ ನಿವಾಸಿಯಾಗಿದ್ದ ವೆಲ್ಡರ್, ಅವರ ಪತ್ನಿ ಫೌಸಿಯಾ ಬೇಗಂ(40) ಮಗಳು ಮೆಹಕ್ ಸಾನಿಯಾ(18), ನಾಜಿಯಾ ಬೇಗಂ(30), ಕಲಾಪಥರ್ ನಿವಾಸಿ, ಹರ್ಸಿಯಾ ಬೇಗಂ(28), ಮತ್ತು ಅವರ ನಾಲ್ಕು ವರ್ಷದ ಮಗಳು ಆಶಾ ನಿವಾಸಿ ಎಂದು ಗುರುತಿಸಲಾಗಿದೆ.
ಮೃತರು ನಗರದಿಂದ ಕರ್ನಾಟಕದ ಗುರ್ಮಿಟಕಲ್‌ಗೆ ಇನ್ನೋವಾದಲ್ಲಿ ತೆರಳುತ್ತಿದ್ದರು. ಕಾರು ಕಂದವಾಡ ಗೇಟ್ ತಲುಪುತ್ತಿದ್ದಂತೆ ಭಾರೀ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ, ಕಾರು ಸಂಪೂರ್ಣವಾಗಿ ಹಾನಿಯಾಗಿದ್ದು, ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.