ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್‌ಗೆ ಒತ್ತಾಯ: ಇಲ್ಲ ಅಂದಿದ್ದಕ್ಕೆ 2 ಮಹಿಳಾ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್!

ಉದ್ಯಮಿಯೊರ್ವರನ್ನು ಕೊಲ್ಲಲು ಸುಪಾರಿ ಪಡೆದು ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಪುಡಿ ರೌಡಿಗಳು ಸೆಕ್ಸ್ ವರ್ಕರ್ ಇಲ್ಲ ಅಂದಿದ್ದಕ್ಕೆ ಹೋಟೆಲ್ ಮಹಿಳಾ ಸಿಬ್ಬಂದಿಯನ್ನೇ ಗ್ಯಾಂಗ್ ರೇಪ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೈಪುರ: ಉದ್ಯಮಿಯೊರ್ವರನ್ನು ಕೊಲ್ಲಲು ಸುಪಾರಿ ಪಡೆದು ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಪುಡಿ ರೌಡಿಗಳು ಸೆಕ್ಸ್ ವರ್ಕರ್ ಇಲ್ಲ ಅಂದಿದ್ದಕ್ಕೆ ಹೋಟೆಲ್ ಮಹಿಳಾ ಸಿಬ್ಬಂದಿಯನ್ನೇ ಗ್ಯಾಂಗ್ ರೇಪ್ ಮಾಡಿದ್ದಾರೆ. 

ರಾಜಸ್ಥಾನದ ನೀಮ್ರಾನಾದಲ್ಲಿ ಈ ಘಟನೆ ನಡೆದಿದೆ. ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಆರೋಪಿಗಳಾದ ಪ್ರಿನ್ಸ್ ತಿವಾರಿ, ದನ್ವೀರ್,  ಲೋಕೇಶ್, ರಾಹುಲ್ ಮತ್ತು ನರೇಶ್ ಗುಜ್ಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ಇನ್ನು ವಿಚಾರಣೆ ವೇಳೆ ಆರೋಪಿಗಳು ಭಯಾನಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಉದ್ಯಮಿಯೊಬ್ಬರನ್ನು ಕೊಲೆ ಮಾಡುವ ಉದ್ದೇಶದಿಂದ ತ್ರಿಸ್ಟಾರ್ ಹೋಟೆಲ್ ನಲ್ಲಿ ಉಳಿದುಕೊಂಡಿರುವುದಾಗಿ ಹೇಳಿದ್ದಾರೆ. 

ಹೋಟೆಲ್ ರೂಂ ಪಡೆದ ನಂತರ ಸೆಕ್ಸ್ ವರ್ಕರ್ ರನ್ನು ರೂಂಗೆ ಕಳುಹಿಸುವಂತೆ ಕೇಳಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದು ಇದರಿಂದ ಕ್ರೋಧಗೊಂಡ ಆರೋಪಿಗಳು ಮಹಿಳಾ ಸಿಬ್ಬಂದಿ ಮಲಗಿದ್ದ ರೂಂಗೆ ನುಗ್ಗಿದ್ದಾರೆ. ಇಬ್ಬರು ರೂಂನ ಒಳ ಹೋಗಿ ಗನ್ ತೋರಿಸಿ ಇಬ್ಬರು ಮಹಿಳಾ ಸಿಬ್ಬಂದಿಯನ್ನು ರೇಪ್ ಮಾಡಿದ್ದಾರೆ. 

ಘಟನೆ ಕುರಿತಂತೆ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ವಿಚಾರ ತಿಳಿಸಿದ್ದು ಘಟನಾ ಸ್ಥಳಕ್ಕೆ ಬಂಧ ಪೊಲೀಸುರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com