ಪಶ್ಚಿಮ ಬಂಗಾಳ ಗುಜರಾತ್ ಆಗಲು ಬಿಡಲ್ಲ: ಮಮತಾ ಬ್ಯಾನರ್ಜಿ ಗುಡುಗು

ಪಶ್ಚಿಮ ಬಂಗಾಳ ರಾಜ್ಯ ಗುಜರಾತ್ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯ ಗುಜರಾತ್ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ಬಂಗಾಳ ಸಂಗೀತ ಮೇಳ 2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನಾವು ನಮ್ಮ ಮಣ್ಣನ್ನು ಗೌರವಿಸಬೇಕು ಮತ್ತು ಉಳಿಸಬೇಕು. ಯಾರಿಂದಲೂ ಬಂಗಾಳವನ್ನು ನಾಶಪಡಿಸಲು ಸಾಧ್ಯವಿಲ್ಲ, ಬಂಗಾಳವನ್ನು ಗುಜರಾತ್ ಆಗಲು ನಾವು ಅವಕಾಶ ನೀಡುವುದಿಲ್ಲ ಎಂದರು.

ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ, ವಿಭಜನೆಯಲ್ಲಿ ನಂಬಿಕೆ ಹೊಂದದಂತೆ ಸಂಗೀತಗಾರರಲ್ಲಿ ಮನವಿ ಮಾಡಿದ ಮಮತಾ ಬ್ಯಾನರ್ಜಿ, ಸಂಗೀತಗಾರರು ವಿಭಜನೆಯಲ್ಲಿ ನಂಬಿಕೆ ಹೊಂದಿಲ್ಲದಂತೆ ಮಾನವ ಜೀವನವನ್ನು ವಿಭಜಿಸಲು ಪ್ರಯತ್ನಿಸಿದರೆ ಅದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ನಮ್ಮ ಮುಖಗಳು, ಭಾವನೆಗಳು, ಬಣ್ಣಗಳು ವಿಭಿನ್ನವಾಗಿರಬಹುದು ಆದರೆ, ನಾವೆಲ್ಲಾ ಒಂದೇ. ವಿಭಜಿಸಲು ಯಾರಿಗೂ ಅವಕಾಶ ನೀಡಬೇಡಿ, ನಾವೆಲ್ಲ ಒಂದು ಕುಟುಂಬದಂತೆ. ಇದೇ ಮನಸ್ಥಿತಿಯಲ್ಲಿ ವಿಭಜನೆ ಮಾಡುವವರ ವಿರುದ್ಧ ತೀವ್ರ ಹೋರಾಟ ನಡೆಸೋಣ, ಭಯಪಡಬೇಡಿ ಎಂದು ಬ್ಯಾನರ್ಜಿ ತಿಳಿಸಿದರು.

ಡಿಸೆಂಬರ್ ಮತ್ತು ಜನವರಿಯಲ್ಲಿ 630 ಮೇಳಗಳು ನಡೆಯಲಿದ್ದು, ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com