ಅಫ್ಜಲ್ ಗುರು, ಬುರ್ಹಾನ್ ವಾನಿಯನ್ನು ಉಗ್ರರೆಂದು ಪರಿಗಣಿಸದವರು ನನ್ನನ್ನು ಉಗ್ರ ಎನ್ನುತ್ತಿದ್ದಾರೆ: ಕಪಿಲ್ ಮಿಶ್ರಾ

ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಮತ್ತು ಕಾಶ್ಮೀರದ ಉಗ್ರ ಕಮಾಂಡರ್ ಬುರ್ಹಾನ್ ವಾನಿಯನ್ನು ಉಗ್ರರೆಂದು ಪರಿಗಣಿಸದವರು ಇದೀಗ ನನ್ನನ್ನು ಉಗ್ರ ಎಂದು ಕರೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಮತ್ತು ಕಾಶ್ಮೀರದ ಉಗ್ರ ಕಮಾಂಡರ್ ಬುರ್ಹಾನ್ ವಾನಿಯನ್ನು ಉಗ್ರರೆಂದು ಪರಿಗಣಿಸದವರು ಇದೀಗ ನನ್ನನ್ನು ಉಗ್ರ ಎಂದು ಕರೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಉಲ್ಬಣಿಸಿರುವ ಹಿಂಸಾಚಾರಕ್ಕೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಮಾಡಿದ್ದ ಪ್ರಚೋದನಾಕಾರಿ ಭಾಷಣವೇ ಕಾರಣ ಎಂಬ ವಾದ ಕೇಳಿಬರುತ್ತಿದ್ದು, ಇದರ ನಡುವೆಯೇ ಸಿಎಎ ವಿರೋಧಿ ಪ್ರತಿಭಟನಾಕಾರರ ಗುಂಪು ಮತ್ತು ವಿಪಕ್ಷ ನಾಯಕರು ಕಪಿಲ್ ಮಿಶ್ರಾ ವಿರುದ್ಧ ಕಿಡಿಕಾರುತ್ತಿದ್ದು, ಅವರನ್ನು ಉಗ್ರಗಾಮಿ ಎಂದು ಟೀಕಿಸುತ್ತಿದ್ದಾರೆ. 

ಇದೀಗ ತಮ್ಮ ವಿರುದ್ಧದ ಟೀಕೆಗಳಿಗೆ ಟ್ವಿಟರ್ ನಲ್ಲಿ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಮತ್ತು ಕಾಶ್ಮೀರದ ಉಗ್ರ ಕಮಾಂಡರ್ ಬುರ್ಹಾನ್ ವಾನಿಯನ್ನು ಉಗ್ರರೆಂದು ಪರಿಗಣಿಸದ ಜನ ಇಂದು ನನ್ನನ್ನು ಉಗ್ರಗಾಮಿ ಎನ್ನುತ್ತಿದ್ದಾರೆ. ದೇಶದ್ರೋಹ ಪ್ರಕರಣ ಹೊತ್ತ ಯಾಕೂಬ್ ಮೆಮನ್, ಉಮರ್ ಖಲೀದ್, ಶರ್ಜೀಲ್ ಇಮಾಮ್ ರಂತಹವರಿಗೆ ಜಾಮೀನು ನೀಡಲು ಕೋರ್ಟ್ ಸುತ್ತ ಅಲೆದ ಮಂದಿ ಇಂದು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದು, ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ಭಾನುವಾರದಿಂದ ನಡೆಯುತ್ತಿರುವ ದೆಹಲಿ ಹಿಂಸಾಚಾರ ಇನ್ನೂ ತಹಬದಿಗೆ ಬಂದಿಲ್ಲ. ಇದಕ್ಕೂ ಮೊದಲು ದೆಹಲಿಯಲ್ಲಿ ನಡೆದ ಸಿಎಎ ಪರ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಕಪಿಲ್ ಮಿಶ್ರಾ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, ಅವರು ಭಾರತದಿಂದ ಹೋಗುವವರೆಗೂ ನಾವು ಶಾಂತಿಯಿಂದ ಕಾಯುತ್ತೇವೆ. ಒಂದು ವೇಳೆ ಈ ಅವಧಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ನಿಲ್ಲಿಸದಿದ್ದರೆ ನಾವು ಬೀದಿಗಿಳಿದು ಉಗ್ರ ಹೋರಾಟ ಮಾಡೋಣ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com