ಅಧ್ಯಕ್ಷೀಯ ಚುನಾವಣೆ ಬಳಿಕ ಭಾರತಕ್ಕೆ ಬರಲು ಇಚ್ಛಿಸಿದ್ದೆ ಆದರೆ, ಮೋದಿ ಇದಕ್ಕೆ ಒಪ್ಪಿರಲಿಲ್ಲ: ಟ್ರಂಪ್
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಭೇಟಿ ನೀಡಲು ಇಚ್ಛಿಸಿದ್ದೆ. ಆದರೆ, ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಪ್ಪಿರಲಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
Published: 26th February 2020 09:27 AM | Last Updated: 26th February 2020 09:27 AM | A+A A-

ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಟ್ರಂಪ್
ನವದೆಹಲಿ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಭೇಟಿ ನೀಡಲು ಇಚ್ಛಿಸಿದ್ದೆ. ಆದರೆ, ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಪ್ಪಿರಲಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಆಯೋಜಿನಸಿದ್ದ ಔತಣಕೂಟದ ಬಳಿಕ ಮಾತನಾಡಿರುವ ಟ್ರಂಪ್ ಅವರು, ಭಾರತ ಭೇಟಿ ಕುರಿತ ತಮ್ಮ ಅನಿಸಿಕೆ ಹಾಗೂ ಅನುಭವಗಳನ್ನು ಹಂಚಿಕೊಂಡರು.
ಭೇಟಿಗೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿದ್ದೆ. ಈ ವೇಳೆ ಅಧ್ಯಕ್ಷೀಯ ಚುನಾವಣೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಬರುವ ಇಚ್ಚೆಯನ್ನು ವ್ಯಕ್ತಪಡಿಸಿದ್ದೆ. ಆದರೆ, ನನ್ನ ಈ ಆಲೋಚನೆ ಮೋದಿಯವರಿಗೆ ಇಷ್ಟವಾಗಿರಲಿಲ್ಲ ಎಂದು ಹೇಳಿದ್ದಾರೆ.
ಎರಡು ದಿನಗಳ ಕಾಲದ ಭಾರತ ಭೇಟಿ ಅತ್ಯಂತ ಸಂತಸದ ದಿವಾಗಿದ್ದು, 18 ಗಂಟೆಗಳ ಕಾಲ ಕಳೆದ ಭಾಸವಾಗಲೇ ಇಲ್ಲ. ಯಾವುದೇ ಕೆಟ್ಟ ಅನುಭವಗಳಾಗಲಿಲ್ಲ. ನಾನು ಅತ್ಯಂತ ಇಷ್ಟಪಡುವ ರಾಷ್ಟ್ರಕ್ಕೆ ಭೇಟಿ ನೀಡಿದ್ದೇನೆ. ಈ ಹಿಂದೆ ಕೂಡ ನಾನು ಭಾರತಕ್ಕೆ ಭೇಟಿ ನೀಡಿದ್ದು ಎಲ್ಲರಿಗೂ ತಿಳಿದೇ ಇದೆ. ಅಧ್ಯಕ್ಷನಾಗಿ ಅಲ್ಲದೆ ಕೂಡ ಭಾರತಕ್ಕೆ ಬಂದಿದ್ದೇನೆ. ಎಷ್ಟು ಬಾರಿ ಭಾರತಕ್ಕೆ ಬಂದಲೂ ಸಾಕಷ್ಟು ಬಾರಿ ಆಶಾದಾಯಕವಾಗಿ ಹಿಂತಿರುಗುತ್ತೇನೆ. ಭಾರತದಲ್ಲಿ ಬಹಳ ಅರಾಮದಾಯಕವಾಗಿರುತ್ತೇನೆ. ಭಾಷಣ ಮಾಡಿದಷ್ಟು ಆರಾಮವಾಗಿರುತ್ತೇನೆ. ಭಾಷಣ ಓದಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ. ಭಾರತವನ್ನು ಪ್ರೀತಿಸುತ್ತೇನೆ. ಗೌರವಿಸುತ್ತೇನೆ. ಮೆಲಾನಿಯಾ ಟ್ರಂಪ್ ಅವರಿಗೂ ಇದೇ ರೀತಿಯ ಅನುಭವವಾಗಿದೆ ಎಂದುಕೊಳ್ಳುತ್ತೇನೆಂದು ತಿಳಿಸಿದ್ದಾರೆ.
ಟೆಕ್ಸಾಸ್ ನಲ್ಲಿಯೂ ಮೋದಿ ಜೊತೆಗೆ ಉತ್ತಮ ಕಾಲ ಕಳೆದಿದ್ದೆ. ಅಮೆರಿಕಾದಲ್ಲಿ ಈಗಲೂ ಹೌಡಿ ಮೋದಿ ಬಗ್ಗೆ ಮಾತನಾಡುತ್ತಾರೆ. ಟೆಕ್ಸಾಸ್ ಅತ್ಯಂದ ವಿಶಾಲ ಪ್ರದೇಶವಾಗಿದ್ದು, ಅದನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನೆಕೂಡ 1,25,0000 ಜನರು ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಹಳ ಸಂತೋಷವಾಯಿತು. ಇದಲ್ಲದೆ ಸಾವಿರಾರು ಜನರು ಸ್ಟೇಡಿಯಂ ಒಳಗೆ ಪ್ರವೇಶ ಪಡೆಯಲು ಹೊರಗೆ ನಿಂತಿದ್ದರು ಎಂದಿದ್ದಾರೆ.